ಬಾಲಿವುಡ್: ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಮೂಲಕ ಕಪೂರ್ ಹಾಗೂ ಅಹೂಜಾ ಕುಟುಂಬದಲ್ಲಿ ಸಂತಸ ಮೂಡಿದೆ.
ಈ ಖುಷಿ ಸುದ್ದಿಯನ್ನು ಸೋನಂ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಕತ್ರಿನಾ ಕೈಫ್ , ಕೃತಿ ಸನೋನ್ ಸೇರಿ ಅನೇಕ ಸೆಲೆಬ್ರಿಟಿಗಳು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.
2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ‘ನಿಮ್ಮ ಮೂವರಿಗೆ ನನ್ನ ಪ್ರೀತಿ’ ಎಂದು ಕತ್ರಿನಾ ಹೇಳಿದ್ದಾರೆ. ಶಿಲ್ಪಾ ಶೆಟ್ಟಿ, ಕೃತಿ, ಜಾಕ್ವೆಲಿನ್ ಮೊದಲಾದವರು ಕಂಗ್ರಾಜ್ಯುಲೇಷನ್ ತಿಳಿಸಿದ್ದಾರೆ.