News Karnataka Kannada
Monday, April 22 2024
Cricket
ಬಾಲಿವುಡ್

‘ಬವಾಲ್’​ ಸಿನಿಮಾದಲ್ಲಿ ತೆರೆ ಮೇಲೆ ಬರಲು ಸಜ್ಜಾದ ಜಾನ್ವಿ ಕಪೂರ್​, ವರುಣ್​ ಧವನ್​

bawaal
Photo Credit : News Kannada

ಬಾಲಿವುಡ್​ ನಟ ವರುಣ್​ ಧವನ್​ ಹಾಗೂ ಜಾನ್ವಿ ಕಪೂರ್ ಶೀಘ್ರದಲ್ಲಿಯೇ ಬವಾಲ್​ ಸಿನಿಮಾದಲ್ಲಿ ಒಟ್ಟಾಗಿ ತೆರೆ ಮೇಲೆ ಬರಲಿದ್ದಾರೆ. ಈ ಸಿನಿಮಾ ಜುಲೈ 21ರಂದು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಲಿದೆ. ಸಿನಿಮಾ ರಿಲೀಸ್​ಗೂ ಮುನ್ನ ವರುಣ್​ ಹಾಗೂ ಜಾನ್ವಿ ಸಿನಿಮಾ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಿನಿಮಾ ತಂಡ ದಿಲ್​ ದೇ ದಿಲ್​ ತಕ್​ ಬಿಡುಗಡೆ ಮಾಡಿದೆ. ವರುಣ್​ ಹಾಗೂ ಜಾನ್ವಿ ಇದರಲ್ಲಿ ಸಖತ್​ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ವರುಣ್​ ಧವನ್​, ಇದು ನನಗೆ ಅತ್ಯಂತ ರೋಮಾಂಚನಕಾರಿ ಹಾಗೂ ಲಾಭದಾಯಕ ಪಾತ್ರವಾಗಿದೆ. ಇದೊಂದು ಸವಾಲಿನ ಪ್ರಯಾಣ ಕೂಡ ಹೌದು. ಅಜ್ಜು ಹಾಗೂ ನಿಶಾರ ಪ್ರಣಯ ಕತೆ ಪ್ರಪಂಚಾದ್ಯಂತ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

ನಟಿ ಜಾನ್ವಿ ಕಪೂರ್​ ಕೂಡ ಈ ವಿಚಾರವಾಗಿ ಮಾತನಾಡಿದ್ದು, ನಾವು ನಮಗೆ ಸಿಕ್ಕ ಪಾತ್ರಗಳಿಗೆ ಹೊಂದಿಕೊಳ್ಳುತ್ತೇವೆ. ಈ ಸಿನಿಮಾದಲ್ಲಿ ನಿಶಾ ಪಾತ್ರವು ಸಾಕಷ್ಟು ಕನಸುಗಳನ್ನು ಹೊತ್ತ ಸರಳ ಯುವತಿಯ ಪಾತ್ರವಾಗಿದೆ. ಬವಾಲ್​ನಲ್ಲಿ ನಿಶಾಳ ಜೀವನ, ಅವಳ ಪ್ರೀತಿ ಎಲ್ಲವೂ ಪ್ರೇಕ್ಷಕರಿಗೆ ಹತ್ತಿರ ಎನಿಸಲಿದೆ ಎಂದಿದ್ದಾರೆ. ಸಾಜಿದ್​ ನಾಡಿಯಾಡ್​ವಾಲಾರ ನಾಡಿಯಾಡ್​​ವಾಲಾ ಗ್ರ್ಯಾಂಡ್​​ಸನ್​ ಎಂಟರ್​ಟೈನ್​ಮೆಂಟ್​ ಈ ಸಿನಿಮಾವನ್ನು ನಿರ್ಮಿಸಿದ್ದು , ನಿತೇಶ್​ ತಿವಾರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು