News Karnataka Kannada
Sunday, May 05 2024
ಬಾಲಿವುಡ್

‘ಲಾಕ್‌ಅಪ್’ ರಿಯಾಲಿಟಿ ಶೋ ಮೇಲಿನ ತಡೆಯಾಜ್ಞೆ ತೆರವುಗೊಳಿಸಿದ ನ್ಯಾಯಾಲಯ

Kangana
Photo Credit :

ತನ್ನ ಹೊಸ ಶೋ “ಲಾಕ್‌ಅಪ್”, ಮೇಲೇರಿದ್ದ ತಡೆಯಾಜ್ಞೆಯಿಂದ ಕಂಗಾಲಾಗಿದ್ದ ಕಂಗನಾಗೆ ಬಿಗ್ ರಿಲೀಫ್ ದೊರೆತಿದೆ. ಶೋ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿರುವ ಹೈದರಾಬಾದ್ ನ್ಯಾಯಾಲಯವು, ರಿಯಾಲಿಟಿ ಶೋ ‘ಲಾಕ್ ಅಪ್’ ಅನ್ನು ಯೋಜಿಸಿದಂತೆ ಸ್ಟ್ರೀಮ್ ಮಾಡಲು ಅನುಮತಿ ನೀಡಿದೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಆಕೆ ನಡೆಸಿಕೊಡುತ್ತಿರುವ ಲಾಕ್‌ಅಪ್ ರಿಯಾಲಿಟಿ ಶೋ, ತನ್ನ ಕಾನ್ಸೆಪ್ಟ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಈ ಸಂಪೂರ್ಣ ಕಾನ್ಸೆಪ್ಟ್ ಅನ್ನು ಕಳ್ಳತನ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್,‌ ರಿಯಾಲಿಟಿ ಶೋನ ಸ್ಟ್ರೀಮಿಂಗ್ ದಿನಾಂಕಕ್ಕೆ ತಡೆಯಾಜ್ಞೆಯನ್ನು ನೀಡಿತ್ತು. ಆದರೆ ಇಂದು ನ್ಯಾಯಾಲಯ ತಡೆಯಾಜ್ಞೆಯನ್ನು ತೆರವುಗೊಳಿಸಿ, ರಿಯಾಲಿಟಿ ಶೋ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಇದರಿಂದ ಕಾರ್ಯಕ್ರಮದ ತಯಾರಕರಿಗೆ ಹಾಗೂ ಕಂಗನಾಗೆ ಬಿಗ್ ರಿಲೀಫ್ ದೊರೆತಿರುವುದಂತು ಸತ್ಯ. ಅಂದಹಾಗೇ ಲಾಕ್‌ಅಪ್ ಅನ್ನು ಇಂದಿನಿಂದ ಸ್ಟ್ರೀಮ್ ಮಾಡಲು, ತಯಾರಕರು ನಿರ್ಧರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು