News Karnataka Kannada
Tuesday, April 30 2024
ಬಾಲಿವುಡ್

ಬಿಡುಗಡೆಗೆ ಸಾಲುಗಟ್ಟಿ ನಿಂತ ಬಾಲಿವುಡ್‌ನ‌ ದೊಡ್ಡ ಸಿನಿಮಾಗಳು

Theatre
Photo Credit :

ನವದೆಹಲಿ: ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಿದ್ದೇ ತಡ, ಬಾಲಿವುಡ್‌ನ‌ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಆದರೆ, ಅವುಗಳಿಗೆ ಅಗತ್ಯ ಪ್ರಮಾಣದಲ್ಲಿ ಚಿತ್ರಮಂದಿರಗಳು ಸಿಗುತ್ತವೆಯೇ ಎಂಬುದು ಈಗ ದೊಡ್ಡ ಸಮಸ್ಯೆಯಾಗಿದೆ. ಬರೋಬ್ಬರಿ 750 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಹೃತಿಕ್‌ ರೋಷನ್‌- ರಣಬೀರ್‌ ಕಪೂರ್‌ ತಾರಾಗಣದ “ರಾಮಾಯಣ’, ರಣಬೀರ್‌ ಕಪೂರ್‌- ಆಲಿಯಾ ಭಟ್‌ ತಾರಾಗಣದ ಬ್ರಹ್ಮಾಸ್ತ್ರ ಚಿತ್ರ ಸೇರಿವೆ. ಇನ್ನು, ಬಾಹುಬಲಿ ಖ್ಯಾತಿಯ ಪ್ರಭಾಸ್‌ ಅಭಿಯನದಲ್ಲಿ ಮುಂದೆ ಬರುತ್ತಿರುವ ಮೂರು ಚಿತ್ರಗಳೂ (“ಸಲಾರ್‌’ ಸಿನಿಮಾ ಸೇರಿ) ತಲಾ 400 ಕೋಟಿ ರೂ. ಮೀರಿವೆ.

ಇಂಥ ದೊಡ್ಡ ಬಜೆಟ್‌ ಸಿನಿಮಾಗಳಿಗೆ ಹಾಕಿರುವ ಬಂಡವಾಳ ಹಿಂದಿರುಗಬೇಕಾದರೆ ಅವು ಹೆಚ್ಚೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕು. ಆದರೆ, ಸಾಲು ಚಿತ್ರಗಳು ತೆರೆಕಾಣಲು ಸಿದ್ಧವಿರುವುದರಿಂದ ಹೊಸ ಸಿನಿಮಾಗಳಿಗೆ ಚಿತ್ರಮಂದಿರಗಳ ಬರ ಆವರಿಸಿದೆ. ಇನ್ನು, ಒಟಿಟಿಗಳೂ ತಮ್ಮ ಸಿನಿಮಾ ಕೊಳ್ಳುವ ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡಿರುವುದಿರಂದ ಅಲ್ಲಿಯೂ ನಿರೀಕ್ಷಿತ ಲಾಭ ಸಿಗುವುದು ಅನುಮಾನ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು