ಕೊರೊನಾ ಸೋಂಕು ಬಾಲಿವುಡ್ ಸೆಲೆಬ್ರಿಟಿಗಳನ್ನ ಬಿಟ್ಟು ಬಿಡದೇ ಕಾಡ್ತಿದೆ. ಸಧ್ಯ ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಅವರ ಸಹೋದರಿ ಅನ್ಶುಲಾಗೆ ಕೊರೊನಾ ಧೃಡಪಟ್ಟಿದ್ದು, ಇಬ್ಬರೂ ಕ್ವಾರಂಟೈನ್ʼಗೆ ಒಳಗಾಗಿದ್ದಾರೆ. ಇನ್ನು ಸಂಪರ್ಕಿತರು ಪರೀಕ್ಷೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಅರ್ಜುನ್ ಮತ್ತು ಅನ್ಶುಲಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅರ್ಜುನ್ ಗೆಳತಿ ಮಲೈಕಾ ಅರೋರಾ ಕೂಡ ಮತ್ತೆ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ. ಯಾಕಂದ್ರೆ, ಕ್ರಿಸ್ ಮಸ್ ಪಾರ್ಟಿ ಆಚರಿಸಲು ಅರ್ಜುನ್ ಇತ್ತೀಚೆಗೆ ತನ್ನ ಗೆಳತಿ ಮಲೈಕಾ ಅರೋರಾ ಅವ್ರ ಮನೆಗೆ ಭೇಟಿ ನೀಡಿದರು. ಮಲೈಕಾ ಸಹೋದರಿ ಅಮೃತಾ ಅರೋರಾ ಮತ್ತು ಕರೀನಾ ಕಪೂರ್ ಕೂಡ ಪಾರ್ಟಿಯಲ್ಲಿ ಹಾಜರಿದ್ದರು.