ಬಾಲಿವುಡ್: ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಕಿಮ್ ಫರ್ನಾಂಡಿಸ್ ಲಘು ಹೃದಯಾಘಾತಕ್ಕೆ ತುತ್ತಾಗಿದ್ದಾರೆ.ಬಹ್ರೇನ್ನಲ್ಲಿರುವ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ, ಜಾಕ್ವೆಲಿನ್ ತಮ್ಮ ತಾಯಿಯೊಂದಿಗೆ ಫೋನ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಕಿಮ್ ಸದ್ಯ ಅಪಾಯದಿಂದ ಪಾರಾಗಿದ್ದು, ಮಗಳೊಂದಿಗೆ ಮಾತನಾಡಿದ್ದಾರೆ ಎಂದು ನಟಿಗೆ ಹತ್ತಿರದ ಮೂಲಗಳು ತಿಳಿಸಿವೆ.ಕಿಮ್ ಫರ್ನಾಂಡಿಸ್ ತಮ್ಮ ಪತಿ ಲ್ರಾಯ್ ಫರ್ನಾಂಡಿಸ್ ಜೊತೆಗೆ ಬಹ್ರೇನ್ನಲ್ಲಿ ವಾಸಿಸುತ್ತಿದ್ದಾರೆ. ಜಾಕ್ವೆಲಿನ್ ಸದ್ಯ ಮುಂಬಯಿಯಲ್ಲಿ ವಾಸವಿದ್ದಾರೆ.
ಆಕೆಯ ತಾಯಿ ಕಿಮ್, ಅಪಾಯದಿಂದ ಪಾರಾಗಿದ್ದು, ವೈದ್ಯರು ನಿಗಾ ಇಟ್ಟಿದ್ದಾರೆ. ಸದ್ಯದ ಮಟ್ಟಿಗೆ ಪ್ರಯಾಣ ಮಾಡಲು ಸಾಧ್ಯವಿಲ್ಲದ ಕಾರಣ ಜಾಕ್ವೆಲಿನ್ ಫೇಸ್ ಟೈಂ ಮುಖಾಂತರ ಬಹ್ರೇನ್ನಲ್ಲಿರುವ ತಮ್ಮ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಅವರ ಹತ್ತಿರದ ಮೂಲವೊಂದು ತಿಳಿಸಿದೆ.