ಪೂರ್ವಜರ ಮನೆಯಲ್ಲಿ ಹಸೆಮಣೆ ಏರಲಿದ್ದಾರೆ ರಣಬೀರ್-ಆಲಿಯಾ

ಇಷ್ಟು ದಿನ ಗೌಪ್ಯವಾಗಿದ್ದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್  ಮದುವೆಗೆ ಈಗ ಮಹೂರ್ತ ಫಿಕ್ಸ್ ಆಗಿದೆ. ಸರಳ ಸಮಾರಂಭದ ಮೂಲಕ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ರಣಬೀರ್ ಆಲಿಯಾ ಭಟ್ ಮದುವೆ ಏಪ್ರಿಲ್‌ನಲ್ಲಿ ನಡೆಯಲಿದೆ ಅಂತ ಬಿಟೌನ್ ತುಂಬಾ ಗುಲ್ಲೆದ್ದಿದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ಈ ಸಿನಿಮಾದ ಸೆಟ್‌ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಅರಳಿದ್ದು ಅಂತ ಹೇಳಲಾಗುತ್ತಿದೆ. ಅಷ್ಟೆ ಅಲ್ಲ ಆಲಿಯಾಗೆ ಚಿಕ್ಕ ವಯಸ್ಸಿನಲ್ಲೇ ರಣಬೀರ್ ಮೇಲೆ ಕ್ರಶ್ ಆಗಿತ್ತಂತೆ. ಈಗ ಪ್ರೇಮದಲ್ಲಿ ಬಿದ್ದಿರೋ ಈ ಜೋಡಿ ಮದುವೆ ಆಗಲು ಡಿಸೈಡ್ ಮಾಡಿದೆ. ಆದ್ರೆ ಈ ಜೋಡಿ ವಿವಾಹಕ್ಕೆ ಐಶಾ ಐಷಾರಾಮಿ ಹೋಟೆಲ್ ಅಥವಾ ವಿಲ್ಲಾವನ್ನ ಹುಡುಕಿಲ್ಲ. ಅವರ ಪೂರ್ವಜರ ಮನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ, ಇದೇ ಮನೆಯಲ್ಲಿ ರಣಬೀರ್ ಕಪೂರ್ ತಂದೆ-ತಾಯಿ, ರಿಷಿ ಕಪೂರ್ ಹಾಗೂ ನೀತು ಕಪೂರ್ 1980ರ ಜನವರಿ 20ರಂದು ಮದುವೆ ಆಗಿದ್ರು. ಅದೇ ಮನೆಯಲ್ಲಿ ರಣಬೀರ್-ಆಲಿಯಾ ಹಸೆಮಣೆ ಏರುತ್ತಿದ್ದಾರೆ. 450 ಅತಿಥಿಗಳಿಗೆ ಮಾತ್ರ ತಮ್ಮ ಮದುವೆಗೆ ಆಹ್ವಾನಿಸಲಿದೆಯಂತೆ ಈ ಜೋಡಿ. ಏಪ್ರಿಲ್‌ನಲ್ಲಿ ಮದುವೆ ಅಂತ ಹೇಳಲಾಗ್ತಿದೆಯೇ ಹೊರತು ಮದುವೆ ದಿನಾಂಕವನ್ನ ಈ ಜೋಡಿ ರಿವೀಲ್ ಮಾಡಿಲ್ಲ.

Gayathri SG

Recent Posts

‘ಕಲ್ಕಿ-2898 AD’ ಚಿತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ ದೀಪಿಕಾ ಪಡುಕೋಣೆ

ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ 'ಕಲ್ಕಿ-2898 AD' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್‌…

8 mins ago

ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್; ಖ್ಯಾತ ಗಾಯಕಿ ಮಾಹಿತಿ

ಕಾಲಿವುಡ್‌ ನಟ ಧನುಷ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.…

17 mins ago

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ ಏನಂದ್ರು ?

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಪರಪ್ಪರ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ ಶಾಸಕ…

42 mins ago

ಅಂಕಿತಾ ಓದಿದ ಶಾಲೆಗೆ 1 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ

ಈ ವರ್ಷದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಫಸ್ಟ್…

54 mins ago

10 ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಏರಿಕೆಯಾಗಿದ್ದು ಎಷ್ಟು?

ಪ್ರಧಾನಿ ನರೇಂದ್ರ ಮೋದಿ ಅವರು ಸತತ 3ನೇ ಬಾರಿ ಲೋಕಸಭಾ ಚುನಾವಣೆಗೆ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇಂದು ಬೆಳಗ್ಗೆ 11.40ರ…

1 hour ago

ಕರೆಂಟ್ ಕಟ್‌ನಿಂದಾಗಿ ಜನರ ಜೀವನ ಕತ್ತಲು: ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದು ಚಿಕ್ಕ ಮಳೆ ಬಂದರೆ ಸಾಕು ಕೆಲವೊಂದು ಭಾಗಗಳಲ್ಲಿ ಕರೆಂಟ್ ಇಲ್ಲದೆ, ಕತ್ತಲಲ್ಲಿ ಜೀವನ ನಡೆಸುವಂತಾಗಿದೆ.…

2 hours ago