News Karnataka Kannada
Monday, April 29 2024
ಬಾಲಿವುಡ್

ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಬಾಲಿವುಡ್ ನಟಿ ಕಂಗನಾ ರಣಾವತ್

Kangana Ranaut 10092021
Photo Credit :

ನವದೆಹಲಿ : ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಅತ್ತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಇದು ಅವರಿಗೆ ದೊರಕಿದ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿಯಾಗಿದೆ.

“ಮಣಿಕರ್ಣಿಕಾ” ಚಿತ್ರದ “ಕ್ವೀನ್ ಆಫ್ ಝಾನ್ಸಿ” ಮತ್ತು “ಪಂಗಾ” ಚಿತ್ರಗಳಲ್ಲಿನ ಅತ್ತ್ಯುತ್ತಮ ಅಭಿನಯಕ್ಕೆ ನೀಡಲಾಗಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರದಾನ ಮಾಡಿದರು. ಈ ವಿಶೇಷ ಕಾರ್ಯಕ್ರಮಕ್ಕಾಗಿ ಅವರು ಸಾಂಪ್ರದಾಯಿಕ ಶೈಲಿಯ ರೇಷ್ಮೇ ಸೀರೆ ಉಟ್ಟು ಆಗಮಿಸಿದ್ದರು.

ವೇದಿಕೆಗೆ ಹೋಗುವ ಮುನ್ನ ತಮ್ಮ ಸುಂದರ ಫೋಟೋಗಳನ್ನು ಇನ್ಟಾಗ್ರಾಮ್‍ನಲ್ಲಿ ಹಂಚಿಕೊಂಡರು. ಇದಕ್ಕೂ ಮುನ್ನ, “ಅತ್ತ್ಯುತ್ತಮ ಪೋಷಕ ನಟಿ”, ಮತ್ತು “ಕ್ವೀನ್”, “ತನು ವೆಡ್ಸ್ ಮನು ರಿಟನ್ಸ್” ಗಾಗಿ ಅತ್ತ್ಯುತ್ತಮ ನಟಿ ಪ್ರಶಸ್ತಿಗಳನ್ನು ಪಡೆದಿದ್ದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ, ತಮ್ಮ ಪೋಷಕರೊಂದಿಗಿನ ಫೋಟೋ ಇನ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ನನಗೆ ಸದಾ ಪೋತ್ಸಾಹ ನೀಡುತ್ತಿರುವ ತಂದೆ ತಾಯಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು