ಹೊಸದಿಲ್ಲಿ : ಬಾಲಿವುಡ್ ನಟಿ ಸೋನಂ ಕಪೂರ್ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳರನ್ನು ಪತ್ತೆ ಹಚ್ಚಲಾಗಿದೆ. ಫೆಬ್ರವರಿಯಲ್ಲಿ ದಿಲ್ಲಿ ನಿವಾಸದ ಮನೆಯಲ್ಲಿ 2.4ಕೋಟಿ ರೂ. ಬೆಲೆಯ ಚಿನ್ನಾಭರಣ ಕಳ್ಳತನವಾಗಿತ್ತು. ಇದು ಭಾರೀ ಸುದ್ದಿಯಾಗಿತ್ತು.
ಚಿನ್ನಾಭರಣ ಕದ್ದಿದ್ದ ಕಳ್ಳಿ ಬೇರಾರೂ ಅಲ್ಲ, ಸೋನಂ ಕಪೂರ್ ಅತ್ತೆಯನ್ನು ನೋಡಿಕೊಳ್ಳುತ್ತಿದ್ದ ನರ್ಸ್ ಅಪರ್ಣ ರೌತ್ ವಿಲ್ಸನ್ ಎಂಬುವಳೇ ಆಗಿದ್ದು, ತನ್ನ ಪತಿ ನರೇಶ್ ಕುಮಾರ್ ಸಾಗರ್ ಜತೆ ಸೇರಿ ಕಳ್ಳತನ ಮಾಡಿದ್ದಾಳೆ. ಈತ ಸಹಕಾರ್ಪುರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಇಬ್ಬರು ಸೇರಿ ಫೆ.11ರಂದು ಚಿನ್ನಾಭರಣ ಕದ್ದಿದ್ದರು.ಫೆ.23ರಂದು ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ನಟಿ ಸೋನಂಕಪೂರ್ ಹಾಗೂ ಆನಂದ್ ಅಹುಜಾ ಮನೆಯಲ್ಲಿ 20 ಜನರು ಕೆಲಸಗಾರರಿದ್ದಾರೆ ಎಲ್ಲರನ್ನೂ ವಿಚಾರಿಸಲಾಗಿತ್ತು ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.