ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟ ನಂತರ ಅವರ ಸಂಪರ್ಕದಲ್ಲಿದ್ದ ಮೂವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.ಡಿಸೆಂಬರ್ 11 ರಂದು ನಟಿ ಕರೀನಾ ಅವರಿಗೆ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಅವರ ಮನೆಯನ್ನು ಮುಂಬೈ ಬಿಎಂಸಿ ಸೀಲ್ ಡೌನ್ ಮಾಡಿತ್ತು.
ನಟಿ ಕರೀನಾ ಕಪೂರ್ ಸಂಪರ್ಕದಲ್ಲಿದ್ದ ಅಮೃತಾ ಅರೋರಾ, ಮಹೀಪ್ ಕಪೂರ್ ಹಾಗೂ ಸೀಮಾ ಖಾನ್ಗೆ ಸೋಂಕು ದೃಢಪಟ್ಟಿದೆ.
ಕರೀನಾ ಅವರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು ಈ ವೇಳೇ ಅಮೃತಾ ಅರೋರಾ, ಮಹೀಪ್ ಕಪೂರ್ ಹಾಗೂ ಸೀಮಾ ಖಾನ್ಗೆ ಕೊರೋನಾ ಪಾಸಿಟಿವ್ ಬಂದಿದೆ.