ವಿರಾಟ್ ಹಾಗೂ ಅನುಷ್ಕಾ ಪುತ್ರಿ ವಮಿಕಾ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಫರಾನ್ ಅಕ್ತರ್ ಮಾತನಾಡಿದ್ದು, ಮಗುವನ್ನು ರೇಪ್ ಮಾಡುತ್ತೇನೆ ಎಂದಿದ್ದ ಕ್ರೂರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈ ಪೊಲೀಸರ ಬಗ್ಗೆ ಹೆಮ್ಮೆ ಎನಿಸುತ್ತದೆ.
ನಮ್ಮ ಸಮಾಜದಲ್ಲಿ ಇನ್ನೊಂದು ಕೆಲಸ ಬಾಕಿ ಇದೆ, ಎಷ್ಟೋ ಮಂದಿ ಮಹಿಳಾ ಪತ್ರಕರ್ತರಿಗೂ ಕೊಲೆ, ಅತ್ಯಾಚಾರ ಬೆದರಿಕೆಗಳು ಎದುರಾಗುತ್ತಿವೆ. ಈ ರೀತಿ ಬೆದರಿಕೆ ಹಾಕುವವರನ್ನೂ ಪೊಲೀಸರು ಅರೆಸ್ಟ್ ಮಾಡಬೇಕು ಎಂದಿದ್ದಾರೆ.