ಮುಂಬಯಿ: ಬಾಲಿವುಡ್‌ಗೆ ಇದೀಗ ಮತ್ತೊಂದು ಅಘಾವುಂಟಾಗಿದೆ. ಯುವನಟಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮುಂಬೈನ ಲೋಖಂಡವಾಲಾದಲ್ಲಿ ನಡೆದಿರುವುದು ವರಿದಯಾಗಿದೆ.
ನೂರ್ ಮಾಲಾಬಿಕಾ ದಾಸ್(31) ನೇಣು ಬಿಗಿದುಕೊಂಡು ಮೃತಪಟ್ಟ ನಟಿ. ಜೂ.6 ರಂದು ಲೋಖಂಡವಾಲಾದಲ್ಲಿರುವ ತನ್ನ ಅಪಾರ್ಟ್ ಮೆಂಟ್ ನಲ್ಲಿ ನೂರು ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದ್ದನ್ನು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಓಶಿವಾರ ಪೊಲೀಸರು ಆಕೆಯ ಕೊಠಡಿಯ ಬಾಗಿಲು ಮುರಿದು ನೋಡಿದಾಗ ನೂರ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ದಾಸ್ ಬೆಡ್ ರೂಂನಲ್ಲಿ ಡೈರಿಯೊಂದು ಪತ್ತೆಯಾಗಿದೆ. ಇತ್ತ ನಟಿ ಕೋಣೆಯಲ್ಲಿ ಪತ್ತೆಯಾದ ಮಾತ್ರೆಗಳು, ಔಷಧಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 37 ವರ್ಷದ ನಟಿ ದಾಸ್ 2023ರಲ್ಲಿ ತೆರೆಕಂಡ ಟ್ರಯಲ್ ವೆಬ್ ಸೀರಿಸ್‌ನಲ್ಲಿ ಕಾಜೋಲ್ ಜೊತೆ ಕಾಣಿಸಿಕೊಂಡಿದ್ದರು. ಕುಟುಂಬದಿಂದ ದೂರ ಉಳಿದಿದ್ದ ದಾಸ್ ಯಾರ ಜೊತೆಗೂ ಸಂಪರ್ಕ ಇರಲಿಲ್ಲ ಎಂದು ತಿಳಿದುಬಂದಿದೆ.

