ಬಾಲಿವುಡ್ ನಟ ಆಮಿರ್ ಖಾನ್ ಹಾಗೂ ಗೌರಿ ಸ್ಪ್ರಾಟ್ ಜುಲೈ 5ರಂದು ಮುಂಬೈನಲ್ಲಿರುವ ಆಮಿರ್ ಖಾನ್ ಅವರ ನಿವಾಸದಲ್ಲಿ ಸರಳವಾಗಿ ವಿವಾಹ ನೋಂದಣಿ ನಡೆಯಲಿದ್ದು, ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಈ ಮದುವೆಗೆ ಅಗತ್ಯವಿರುವ ಸಂಪೂರ್ಣ ಆಹಾರ ಮೆನುವನ್ನ ಆಮಿರ್ ಮತ್ತು ಗೌರಿ ಅವರ ಮಕ್ಕಳೇ ಪ್ಲ್ಯಾನ್ ಮಾಡಿದ್ದಾರೆ. ಸಮಾರಂಭದ ಎಲ್ಲಾ ಆಹಾರ ವ್ಯವಸ್ಥೆಯನ್ನು ಮಕ್ಕಳು ಆಯ್ಕೆ ಮಾಡಿದ್ದು, ಮದುವೆಯ ಇತರೆ ಕಾರ್ಯಕ್ರಮಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ.
ಆಮಿರ್ ಖಾನ್ಮಕ್ಕಳಾದ ಜುನೈದ್, ಐರಾ ಹಾಗೂ ಆಜಾದ್ ಮತ್ತು ಗೌರಿ ಸ್ಪ್ರಾಟ್ ಪುತ್ರ, ಇಬ್ಬರ ಮಕ್ಕಳೂ ಈ ಮದುವೆಯನ್ನು ವಿಶೇಷವಾಗಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಮದುವೆ ಬಗ್ಗೆ ಮಾತನಾಡಿದ್ದ ಆಮಿರ್ ಖಾನ್, ಇದು ಮನೆಯಲ್ಲೇ ನಡೆಯುವ ಸರಳ ವಿವಾಹ ನೋಂದಣಿ. ಎರಡೂ ಕುಟುಂಬದವರು ಮತ್ತು ಕೆಲವು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ನಾವು ಯಾವುದೇ ಅದ್ದೂರಿ ಆಚರಣೆ ಬಯಸುವುದಿಲ್ಲ ಎಂದು ಹೇಳಿದ್ದರು.
ಬೆಂಗಳೂರಿನ ಮೂಲದ ಗೌರಿ ಸ್ಪ್ರಾಟ್ ಫ್ಯಾಷನ್ ಮತ್ತು ಉದ್ಯಮಶೀಲತೆ ಕ್ಷೇತ್ರದ ಹಿನ್ನೆಲೆ ಹೊಂದಿದ್ದಾರೆ. ಅವರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪ್ರಸ್ತುತ ಆಮಿರ್ ಖಾನ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಮಿರ್ ಖಾನ್ ಈ ಹಿಂದೆ ರೀನಾ ದತ್ತಾ ಹಾಗೂ ಬಳಿಕ ನಿರ್ದೇಶಕಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಇಬ್ಬರಿಂದಲೂ ಬೇರ್ಪಟ್ಟ ಬಳಿಕ ಈಗ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗುತ್ತಿದ್ದಾರೆ.

