ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಯಾವಾಗ ಶುರು ಆಗಲಿದೆ ಎಂದು ಕಾದಿದ್ದ ವೀಕ್ಷಕರಿಗೆಲ್ಲ ಇಂದು (ಸೆಪ್ಟೆಂಬರ್ 15) ದೊಡ್ಡ ಸುದ್ದಿ ಸಿಕ್ಕಿದೆ. ಅಲ್ಲದೇ ಈ ಸೀಸನ್ನಲ್ಲಿ ಆ್ಯಂಕರ್ ಬದಲಾಗುತ್ತಾರಾ ಎಂಬ ಅನುಮಾನಕ್ಕೂ ತೆರೆ ಬಿದ್ದಿದೆ. ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ಸೆಪ್ಟೆಂಬರ್ 29ರಿಂದ ಆರಂಭ ಆಗಲಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್ ಅವರೇ ಆ್ಯಂಕರ್ ಆಗಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಅಪ್ಡೇಟ್ ನೀಡಲು ‘ಕಲರ್ಸ್ ಕನ್ನಡ’ ಟಿವಿಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ.
‘ಗಿಚ್ಚಿ ಗಿಲಿಗಿಲಿ 3’ ಗ್ರ್ಯಾಂಡ್ ಫಿನಾಲೆಯ ಸಂಚಿಕೆಯ ನಡುವೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಹೊಸ ಪ್ರೋಮೋ ಬಿತ್ತರ ಆಗಿದೆ. ಇದರಲ್ಲಿ ಸುದೀಪ್ ಅವರು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ‘10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೇ ಲೆಕ್ಕ. ಇದು ಹೊಸ ಅಧ್ಯಾಯ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಪ್ರೋಮೋ ನೋಡಿ ಸುದೀಪ್ ಅಭಿಮಾನಿಗಳಿಗೆ ಖುಷಿ ಆಗಿದೆ.

