ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 12ರ ಪಟ್ಟ ಗೆದ್ದ ಗಿಲ್ಲಿ ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಶಿವಣ್ಣ ದಂಪತಿ ಗಿಲ್ಲಿಗೆ ಸಿಹಿ ತಿನಿಸಿ, ಶುಭ ಹಾರೈಸಿದ್ದಾರೆ.

ಬಿಗ್‌ಬಾಸ್ ಫಿನಾಲೆಗೆ ಕೆಲವೇ ದಿನವಿರುವಾಗಲೇ ಶಿವಣ್ಣ ಗಿಲ್ಲಿನೇ ಗೆಲ್ಲೋದು ಎಂದು ಭವಿಷ್ಯ ನುಡಿದಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ 40 ಕೋಟಿಗೂ ಹೆಚ್ಚು ವೋಟ್ ಪಡೆಯುವ ಮೂಲಕ ಗಿಲ್ಲಿ ನಟ ಮೊದಲ ಸ್ಥಾನಗಳಿಸಿದ್ದಾರೆ.