ಇತ್ತೀಚೆಗೆ ದೀಪಿಕಾ ಪಡುಕೋಣೆ ತಾಯಿ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ವಿಚಾರವನ್ನು ರಣವೀರ್ ಸಿಂಗ್ ಹಾಗೂ ಅವರು ಖುಷಿಯಿಂದ ರಿವೀಲ್ ಮಾಡಿದ್ದಾರೆ. ಇದೀಗ ಕರಣ್ ಜೋಹರ್, ದೀಪಿಕಾ ಪ್ರಗ್ನೆಂಟ್ ಆಗಿರುವುದರಿಂದ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಒಂದು ಹೋಲ್ಡ್ನಲ್ಲಿ ಎನ್ನಲಾಗಿದೆ.
ಕರಣ್ ಜೋಹರ್ ವಿಶೇಷವಾಗಿ ದೀಪಿಕಾಗಾಗಿ ಒಂದು ಕಥೆ ತಯಾರಿಸಿದ್ದರಂತೆ. ಈ ಸಿನಿಮಾ ಮಾಡಲು ದೀಪಿಕಾ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ, ಈ ಮಧ್ಯೆ ಮಗು ಹೊಂದುವ ನಿರ್ಧಾರಕ್ಕೆ ಬಂದರು. ಮಗು ಜನಿಸಿದ ಮೇಲೆ ಆರೈಕೆ ಎಂದು ಎರಡು ವರ್ಷ ಅವರು ಬ್ರೇಕ್ ಪಡೆಯಬೇಕಾಗುತ್ತದೆ. ಹೀಗಾಗಿ, ಬೇರೆಯವರನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವಂತೆ ದೀಪಿಕಾ ಅವರು ಕರಣ್ಗೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಕರಣ್ ಜೋಹರ್ ಒಪ್ಪಿಲ್ಲ ಎನ್ನಲಾಗುತ್ತಿದೆ.