ಅಮರಾವತಿ: ಬಿಗ್‌ ಬಾಸ್‌ ಖ್ಯಾತಿಯ ನಟಿ ಸುಭಾಶ್ರೀ ಅವರ ಕಾರು ಅಪಘಾತವಾಗಿರುವ ಘಟನೆ ಇಂದು ಆಂಧ್ರಪ್ರದೇಶದ ನಾಗಾರ್ಜುನ ಸಾಗರ್ ಬಳಿ ನಡೆದಿದೆ.

ಸುಭಾಶ್ರೀ ಅವರ ಕಾರಿಗೆ ಕುಡಿದ ಅಮಲಿನಲ್ಲಿ ಬೈಕ್‌ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂ ಗೊಂಡಿದೆ. ಅದೃಷ್ಟವಶಾತ್‌ ಸುಭಾಶ್ರೀ ಸೇರಿದಂತೆ ಕಾರಿನೊಳಗೆ ಇದ್ದ ಎಲ್ಲಾ ಪ್ರಯಾಣಿಕುರು ಕೂಡಾ ಸುರಕ್ಷಿತವಾಗಿದ್ದಾರೆ. ಸುಭಾಶ್ರೀ ಬಿಗ್ ಬಾಸ್ ತೆಲುಗು ಸೀಸನ್ 7 ರಲ್ಲಿ ಸ್ಪರ್ಧಿಯಾಗಿದ್ದರು.