ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಮೇಲೆ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿ ಮಾಡಿದೆ. ಈ ಚಿತ್ರ ‘ಮಫ್ತಿ’ಯ ಪ್ರೀಕ್ವೆಲ್. ಈ ಚಿತ್ರದ ಪೋಸ್ಟರ್ಗಳು ಮಾತ್ರ ರಿಲೀಸ್ ಆಗಿವೆ.
ಈಗ ಸಿನಿಮಾದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಪಡೆದುಕೊಂಡಿದೆ. ಶಿವರಾಜ್ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಜುಲೈ 12ರಂದು ಮೊದಲ ಝಲಕ್ ನೀಡುವ ಭರವಸೆ ನೀಡಿದ್ದಾರೆ.
‘ಮಫ್ತಿ’ ಸಿನಿಮಾ 2017ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಶಿವಣ್ಣ ಹಾಗೂ ಶ್ರೀಮುರಳಿ ಅವರ ಕಾಂಬಿನೇಷನ್ ಗಮನ ಸೆಳೆಯಿತು. ನರ್ತನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ನಲ್ಲಿ ‘ಭೈರತಿ ರಣಗಲ್’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರವನ್ನು ಶಿವಣ್ಣ ಅವರ ಪತ್ನಿ ಗಿತಾ ಶಿವರಾಜ್ಕುಮಾರ್ ಅವರು ‘ಗೀತಾ ಪಿಕ್ಚರ್ಸ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.
ಆನಂದ್ ಆಡಿಯೋ ಅವರು ‘ಭೈರತಿ ರಣಗಲ್’ ಹಕ್ಕನ್ನು ಪಡೆದ ಬಗ್ಗೆ ಶಿವಣ್ಣ ಟ್ವೀಟ್ ಮಾಡಿದ್ದಾರೆ. ‘ಆನಂದ್ ಆಡಿಯೋದವರು ಭೈರತಿ ರಣಗಲ್ ಆಡಿಯೋ ಹಕ್ಕನ್ನು ಪಡೆದಿದ್ದಾರೆ. ಜುಲೈ 12ರ ಬೆಳಿಗ್ಗೆ 10:10ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಮೊದಲ ಝಲಕ್ ನೀಡುತ್ತೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

