ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಬೇರೆ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿ ಬಂದಿದೆ. ಮುಂದೇನಾಗಬಹುದು ಎಂಬುದನ್ನು ಅರ್ಥೈಸಿಕೊಂಡು ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿ ಆಗಿದೆ.
ಇದು ದೊಡ್ಡ ಸುದ್ದಿ ಆಗಬಾರದು ಎನ್ನುವುದು ಇವರ ಆಶಯ. ಈ ಕಾರಣಕ್ಕೆ ಮಲೈಕಾ ಹಾಗೂ ಅರ್ಜುನ್ ಕಪೂರ್ ಈ ವಿಚಾರದಲ್ಲಿ ಸುಮ್ಮನಿದ್ದಾರೆ. ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ. ಅರ್ಜುನ್ ಕಪೂರ್ಗೆ 38. ಇಬ್ಬರ ಮಧ್ಯೆ ಸುಮಾರು 11 ವರ್ಷಗಳ ಅಂತರ ಇದೆ. ಅರ್ಜುನ್ ಕಪೂರ್ ವಯಸ್ಸಿನಲ್ಲಿ ಸಣ್ಣವರು. ಭವಿಷ್ಯದ ಒಳಿತಿಗೆ ಇವರು ಈ ಬೇರೆ ಆಗಲು ನಿರ್ಧರಿಸಿದ್ದಾರೆ.
ಅರ್ಜುನ್ ಕಪೂರ್ಗೆ ಇನ್ನೂ ವಿವಾಹ ಆಗಿಲ್ಲ. ಅವರು ಮದುವೆ ಆಗಿ ಮಗುವನ್ನು ಪಡೆಯಬೇಕು ಎನ್ನುವ ಕನಸು ಕಂಡಿದ್ದಾರೆ. ಮಲೈಕಾ ವಯಸ್ಸಿಗೆ ಅದು ಸಾಧ್ಯವಿಲ್ಲ. ಮಲೈಕಾಗೆ 22 ವರ್ಷದ ಮಗನಿದ್ದಾನೆ. ಒಂದೊಮ್ಮೆ ಈ ವಯಸ್ಸಿನಲ್ಲಿ ಅವರು ಮಗು ಪಡೆದರೆ ಸಾಕಷ್ಟು ಟ್ರೋಲ್ ಆಗಬೇಕಾಗುತ್ತದೆ. ಹೀಗಾಗಿ, ಸೈಲೆಂಟ್ ಆಗಿ ಇವರು ಬೇರೆ ಆಗೋ ನಿರ್ಧಾರ ತೆಗೆದುಕೊಂಡರು ಎಂದು ವರದಿಯಾಗಿದೆ.

