ಚೆನ್ನೈ: ಕಮಲ್‌ ಹಾಸನ್‌ – ಶಂಕರ್‌ ಅವರ ಪ್ಯಾನ್‌ ಇಂಡಿಯಾ ʼಇಂಡಿಯನ್‌ -2ʼ ಇದೇ ವಾರ ರಿಲೀಸ್‌ ಆಗಲಿದೆ. ಆದರೆ ಸಿನಿಮಾಕ್ಕೆ ಬ್ಯಾನ್‌ ಬಿಸಿ ತಟ್ಟಿದೆ.‘ಇಂಡಿಯನ್ 2’ ಚಿತ್ರ ತಂಡದ ವಿರುದ್ಧ ನಿಷೇಧ ಕೋರಿ ಪ್ರಕರಣವನ್ನು ದಾಖಲಿಸಲಾಗಿದೆ. ‘ವರ್ಮ ಕಲೈ’ [ತಮಿಳು ಸಾಂಪ್ರದಾಯಿಕ ಸಮರ ಕಲೆ ] ಮುಖ್ಯ ಶಿಕ್ಷಕ ಆಸನ್ ರಾಜೇಂದ್ರನ್ ಅವರು ಚಿತ್ರವನ್ನು ನಿಷೇಧ ಮಾಡಬೇಕೆಂದು ಕೇಳಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ಕೇರಳದ ಮಾರ್ಷಲ್ ಆರ್ಟ್ ಶಿಕ್ಷಕರಾಗಿರುವ ಆಸನ್ ರಾಜೇಂದ್ರನ್, “ನಾನು ಕಮಲ್‌ ಹಾಸನ್‌‌ ಅವರಿಗೆ ʼಇಂಡಿಯನ್‌ʼ( ಪಾರ್ಟ್‌ -1) ಗೆ ʼವರ್ಮ ಕಲೈʼ ಕಲೆಯನ್ನು ಕಲಿಸಿದ್ದೇನೆ. ಈ ಕಲೆಯ ತಂತ್ರವನ್ನು ʼಇಂಡಿಯನ್‌ -2ʼನಲ್ಲಿ ಕಮಲ್‌ ಹಾಸನ್‌ ಅವರು ಬಳಸಿಕೊಂಡಿದ್ದಾರೆ. ಚಿತ್ರತಂಡದ ಎರಡನೇ ಭಾಗದಲ್ಲಿ ನಾನು ಕಲಿಸಿದ ಕಲೆಯನ್ನು ಬಳಸಿಕೊಂಡಿದೆ. ಇದಕ್ಕೆ ನನ್ನ ಅನುಮತಿಯನ್ನು ಕೇಳಿಲ್ಲ. ಹೀಗಾಗಿ ಚಿತ್ರವನ್ನು ಬಿಡುಗಡೆಗೆ ಹಾಗೂ ಓಟಿಟಿ ರಿಲೀಸ್‌ ಗೂ ಅವಕಾಶ ನೀಡಬಾರದೆಂದು” ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.