ಬಾರ್ಕೂರು: ಕನ್ನಡ ಚಿತ್ರರಂಗದ ದಂತಕಥೆ, ಅದ್ಭುತ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ ಅವರ 72ನೇ ಜನ್ಮದಿನದ ಅಂಗವಾಗಿ ಬಾರ್ಕೂರಿನ ವಿಶಾಲ ಮಹೇಶ್ ಪೂಜಾರಿ ಅವರು ರಂಗೋಲಿಯಲ್ಲಿ ಅವರ ಚಿತ್ರವನ್ನು ಬಿಡಿಸಿ ಗೌರವ ಸಲ್ಲಿಸಿದ್ದಾರೆ.

ನವೆಂಬರ್ 9, 1954ರಂದು ಜನಿಸಿದ ಶಂಕರ್ ನಾಗ್ ಅವರು ತಮ್ಮ ವಿಶಿಷ್ಟ ಅಭಿನಯ, ನಿರ್ದೇಶನ ಹಾಗೂ ದೂರದೃಷ್ಟಿಯ ಕನಸುಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಚಿತ್ರಗಳು, ಸಾಧನೆಗಳು ಮತ್ತು ಕನಸುಗಳು ಇಂದಿಗೂ ಅಭಿಮಾನಿಗಳಲ್ಲಿ ಜೀವಂತವಾಗಿವೆ.

‘ಆಟೋರಾಜ’ ಎಂದೇ ಜನಪ್ರಿಯರಾಗಿರುವ ಶಂಕರ್ ನಾಗ್ ಅವರು ವಿಶೇಷವಾಗಿ ಆಟೋ ಚಾಲಕರ ಹಾಗೂ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಅಜರಾಮರರಾಗಿದ್ದಾರೆ. ಅವರ ಜನ್ಮದಿನದಂದು ರಂಗೋಲಿ ಕಲೆಯ ಮೂಲಕ ಚಿತ್ರರೂಪದಲ್ಲಿ ಗೌರವ ಸಲ್ಲಿಸಿರುವ ವಿಶಾಲ ಮಹೇಶ್ ಪೂಜಾರಿ ಅವರ ಪ್ರಯತ್ನ ಗಮನ ಸೆಳೆದಿದೆ.