ಮುಂಬೈ: ಬಾಲಿವುಡ್ ನಟ ಅನುಪಮ್ ಖೇರ್ ಅವರು ಬಿಜೆಪಿ ತತ್ವಗಳನ್ನು ಒಪ್ಪಿದವರು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಅದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ನಟ ಅನುಪಮ್ ಖೇರ್ ಅವರು ನಿಗೂಡಾರ್ಥದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅನುಪಮ್ ಹೀಗಾಗಿ ಅವರು ಹೇಳಿರೋದು ಮೋದಿ ಬಗ್ಗೆ ಎನ್ನಲಾಗುತ್ತಿದೆ.
ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ‘ಪ್ರಾಮಾಣಿಕ ವ್ಯಕ್ತಿಗೆ ಯಾವಾಗಲೂ ನೋವು ಸಿಗುತ್ತದೆ’ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
‘ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಹೆಚ್ಚು ಪ್ರಾಮಾಣಿಕನಾಗಿರಬಾರದು ಎಂದು ನಾನು ಆಗಾಗ ಯೋಚಿಸುತ್ತೇನೆ. ಯಾವಾಗಲೂ ನೇರವಾಗಿರುವ ಮರವನ್ನೇ ಮೊದಲು ಕತ್ತರಿಸುತ್ತಾರೆ. ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಾರೆ. ಎಷ್ಟೇ ಅಡೆತಡೆ ಬಂದರೂ ಅವರು ಪ್ರಾಮಾಣಿಕತೆಯನ್ನು ಬಿಟ್ಟುಕೊಡುವುದಿಲ್ಲ. ಈ ಕಾರಣದಿಂದಲೇ ಅವರು ಕೋಟಿ ಕೋಟಿ ಜನರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದಿದ್ದಾರೆ ಅನುಪಮ್ ಖೇರ್.
— Anupam Kher (@AnupamPKher) June 5, 2024

