ಬ್ರಿಟೀಷ್ ಬ್ಯೂಟಿ ಆಮಿ ಜಾಕ್ಸನ್ ಕನ್ನಡ ಸಿನಿರಸಿರಕರಿಗೂ ಚಿರಪರಿಚಿತ. ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಆಕೆ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಆಗಾಗ್ಗೆ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.
ಸದ್ಯ ಆಮಿ ಜಾಕ್ಸನ್ ತಮ್ಮ ಎರಡನೇ ಮದುವೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತನ್ನ ಗೆಳೆಯ ಎಡ್ ವೆಸ್ಟ್‌ವಿಕ್‌ನನ್ನು ಆಕೆ ಮದುವೆ ಆಗಿದ್ದಾರೆ. ಇವರಿಬ್ಬರ ವಿವಾಹ ಸಮಾರಂಭ ಇಟಲಿಯ ಅಮಾಲ್ಫಿ ತೀರದಲ್ಲಿ ನಡೆದಿದೆ. ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಹತ್ತಿರದ ಸಂಬಂಧಿಕರು ಮಾತ್ರ ಭಾಗಿ ಆಗಿದ್ದರು.
ನಾಯಕಿ ಆಮಿ ಜಾಕ್ಸನ್ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. “ಈಗಷ್ಟೇ ಹೊಸ ಪಯಣ ಶುರುವಾಗಿದೆ” ಎಂದು ಬರೆದುಕೊಂಡಿದ್ದಾರೆ. ಸದ್ಯ ಮದುವೆ ಫೋಟೋಗಳು ವೈರಲ್ ಆಗಿದ್ದು ನೆಟ್ಟಿಗರು ನವ ಜೋಡಿಗೆ ಶುಭ ಕೋರುತ್ತಿದ್ದಾರೆ.
ಇನ್ನು 2015ರಲ್ಲಿ ನಟಿ ಆಮಿ ಉದ್ಯಮಿ ಜಾರ್ಜ್ ಪನಯಿಟೊ ಎಂಬಾತನ ಜೊತೆ ಡೇಟಿಂಗ್ ನಡೆಸಿದ್ದರು. ಗರ್ಭಿಣಿ ಕೂಡ ಆಗಿದ್ದರು. ಬಳಿಕ ಮದುವೆ ಆಗಲು ನಿರ್ಧರಿಸಿ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಮದುವೆಗೂ ಮುನ್ನ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ಆಯಂಡ್ರಿಯಾಸ್ ಎಂದು ನಾಮಕರಣ ಮಾಡಿದ್ದರು. ಆದರೆ ಬಳಿಕ ಇಬ್ಬರೂ ದೂರಾಗಿದ್ದರು.

