ಮೊದಲನೇ ವಾರವೇ ಬಿಗ್‌ಬಾಸ್ ಮನೆಯಿಂದ ಹಿರಿಯ ನಟಿಯೊಬ್ಬರು ಔಟ್ ಆಗಿದ್ದಾರೆ. ಕಳೆದ ದಿನ ನಡೆದ ಎಲಿಮಿನೇಷನ್‌ನಲ್ಲಿ ಪ್ರಬಲ ಸ್ಪರ್ಧಿ ಅಂದುಕೊಂಡಿದ್ದ ನಟಿ ಹೊರಬಂದಿದ್ದಾರೆ. ಪ್ರತಿವಾರದಂತೆ ಕಿಚ್ಚನ ಜೊತೆ ವಾರದ ಕಥೆ ಶನಿವಾರ ನಡೆಯಿತು. ಈ ವೇಳೆ ಪ್ರಬಲ ಸ್ಪರ್ಧಿಯನ್ನೇ ಮನೆಯಿಂದ ಹೊರ ಕಳುಹಿಸಲಾಗಿದೆ.
ಹೌದು… ಬಿಗ್‌ಬಾಸ್ ಮನೆಯಿಂದ ಯಾರೂ ಕೂಡ ನಿರೀಕ್ಷಿಸದ ಸ್ಪರ್ಧಿ ಯಮುನಾ ಶ್ರೀನಿಧಿ ಔಟ್ ಆಗಿದ್ದಾರೆ. ಕಡಿಮೆ ವೋಟ್ ಪಡೆದ ಕಾರಣ ಬಿಗ್‌ಬಾಸ್ ಮನೆಯಿಂದ ಯಮುನಾ ಶ್ರೀನಿಧಿ ಹೊರ ಬಂದಿದ್ದಾರೆ. ಈ ವಾರ ಲಾಯರ್ ಜಗದೀಶ್ ಔಟ್ ಆಗುತ್ತಾರೆ ಎಂದು ಎಲ್ಲರೂ ಕೂಡ ಭಾವಿಸಿದ್ದರು.
ಮನೆಯ ಸ್ಪರ್ಧಿಗಳು ಕೂಡ ಜಗದೀಶ್ ಅವರೇ ಮನೆಯಿಂದ ಹೊರಬರುತ್ತಾರೆ ಅಂದುಕೊಂಡಿದ್ದರು. ಅದರೆ ದೊಡ್ಮನೆಯ ಸದಸ್ಯರ ಬಗ್ಗೆ ಸಂಪೂರ್ಣವಾಗಿ ತಿಳಿಯುವ ಮುನ್ನವೇ ಯಮುನಾ ಅವರು ಮನೆಯಿಂದ ಹೊರಬಂದಿದ್ದಾರೆ. ಅಂದಹಾಗೆ ಯಮುನಾ ಅವರನ್ನು ಬಿಗ್‌ಬಾಸ್ ಮನೆಯ ಗಟ್ಟಿ ಸ್ಪರ್ಧಿ ಅಂತಲೇ ಹೇಳಬಹುದು. ಎಲ್ಲರೂ ಕೂಡ ಹಾಗೇ ಭಾವಿಸಿದ್ದರು. ಆದರೆ ಯಮುನಾ ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ ಬಿಗ್‌ಬಾಸ್ ಮನೆಯಿಂದ ಯಮುನಾ ನಿಜವಾಗಲೂ ಹೊರಬಂದ್ರಾ? ಅಥವಾ ಇಲ್ವಾ? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದಕ್ಕೆ ಭಾನುವಾರದ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಅಲ್ಲಿವರೆಗೂ ಕಾದು ನೋಡಬೇಕಿದೆ.

