News Karnataka Kannada
Wednesday, May 08 2024
ಮನರಂಜನೆ

ನಟಿ ಶ್ರೀದೇವಿ ಪತಿ ಕಾರಿನಲ್ಲಿ ಬೆಳ್ಳಿ ಅಕ್ರಮ ಸಾಗಾಟ, ದಾವಣಗೆರೆಯಲ್ಲಿ ಕಾರು ಸಮೇತ ಬೆಳ್ಳಿ ವಶ

Actress Sridevi's husband's car smuggled, silver seized along with car in Davanagere
Photo Credit : Facebook

ದಾವಣಗೆರೆ: ಬಾಲಿವುಡ್‌ನ ಖ್ಯಾತ ನಟಿಯೊಬ್ಬರ ಪತಿಯ ಕುಟುಂಬಕ್ಕೆ ಸೇರಿದ ಬಿಎಂಡಬ್ಲ್ಯು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 66 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಬಳಿ ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್‌ ಜಪ್ತಿ ಮಾಡಿದ್ದಾರೆ.

ತಹಶೀಲ್ದಾರ್‌ ಡಾ.ಅಶ್ವತ್ಥ್‌ ತಪಾಸಣೆ ವೇಳೆ ಬಿಎಂಡಬ್ಲ್ಯು ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದಾಗ ಬಾಕ್ಸ್​ಗಳು ಪತ್ತೆಯಾಗಿದ್ದು, ಇನ್ನಷ್ಟು ತಪಾಸಣೆ ನಡೆಸಿದಾಗ ಅದರೊಳಗೆ ಬೆಳ್ಳಿ ಸಾಮಾಗ್ರಿಗಳು ಸಿಕ್ಕಿವೆ. ಅವುಗಳ ಒಟ್ಟು ಮೌಲ್ಯ 39 ಲಕ್ಷ ರೂ. ಎನ್ನಲಾಗಿದೆ. 66 ಕೆಜಿ ಬೆಳ್ಳಿ ಹಾಗೂ ಬಿಎಂಡಬ್ಲ್ಯು ಕಾರು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಖ್ಯಾತ ನಟಿ ದಿವಂಗತ ಶ್ರೀದೇವಿ ಪತಿ ಚಿತ್ರ ನಿರ್ಮಾಪಕ ಬೋನಿ‌ ಕಪೂರ್ ಕುಟುಂಬಕ್ಕೆ ಸೇರಿದ ಕಾರು ಇದು. ಆದರೆ ಚೆಕ್​ಪೋಸ್ಟ್​ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಬೋನಿ ಕಪೂರ್ ಕುಟುಂಬಸ್ಥರು ಇರಲಿಲ್ಲ. ಈ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಡಾ. ಅಶ್ವಥ್, ಜಪ್ತಿ ಮಾಡಿದ ಬೆಳ್ಳಿ ವಸ್ತುಗಳು ಮತ್ತು ಕಾರು ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿದ್ದಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು