ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ವಿಚಾರಣೆ ಎದುರಿಸುತ್ತಿರುವ ದರ್ಶನ್ ಅವರ ಬಗ್ಗೆ ಕೇಳಿದಾಗ ಶ್ರೀ ಲೀಲಾ ಯಾವ ಪ್ರತಿಕ್ರಿಯೆ ಕೊಟ್ಟಿಲ್ಲ. ಸೆಲೆಬ್ರಿಟಿಗಳು ಎಲ್ಲೇ ಹೋದರು ಅವರಿಗೆ ದರ್ಶನ್ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ.

ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಲಾಗುತ್ತಿದೆ. ಈಗ ನಟಿ ಶ್ರೀಲೀಲಾ ಅವರಿಗೂ ಇದೇ ರೀತಿಯ ಪ್ರಶ್ನೆ ಎದುರಾಗಿದೆ. ಅವರು ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರಲ್ಲಿ ಯೋಗ ಮಾಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಈ ವೇಳೆ ‘ದರ್ಶನ್ ಕೇಸ್ ಬಗ್ಗೆ ಹೇಳಿ’ ಎಂದು ಅವರಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸೋಕೆ ನಿರಾಕರಿಸಿದ್ದಾರೆ. ‘ಯೋಗ ದಿನಾಚರಣೆ ಬಗ್ಗೆ ಮಾತ್ರ ಕೇಳಿ’ ಎಂದಷ್ಟೇ ಅವರು ಹೇಳಿಕೆ ನೀಡುವುದರಿಂದ ತಪ್ಪಿಸಿಕೊಂಡಿದ್ದಾರೆ.