ನಟಿ ರವೀನಾ ಟಂಡನ್ ಕಾರು ಅಪಘಾತದ ಬಗೆಗಿನ ಅಸಲಿ ವಿಚಾರ ಈಗ ಹೊರಬಿದ್ದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಪಿ ರಾಜ್ ತಿಲಕ್ ರೋಷನ್ ‘ ಅಸಲಿಗೆ, ಸುಳ್ಳು ದೂರನ್ನು ದೂರುದಾರರು ನೀಡಿರುವ ಬಗ್ಗೆ ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ.

ಅವರ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ ಮತ್ತು ರವೀನಾ ಅಂದು ಕುಡಿದಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅಸಲಿ ವಿಚಾರ ಹೊರಬಿದ್ದಿದೆ ಎಂದಿದ್ದಾರೆ.

ರವೀನಾ ಟಂಡನ್ ಕಾರು ಮೂವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗಳಾಗಿವೆ. ನಟಿ ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ್ದಾರೆ. ಕೆಟ್ಟದಾಗಿ ಮಾತನಾಡಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು ಅವರ ಮೇಲೆ ಹಲ್ಲೆ ಕೂಡ ಮಾಡಲಾಗಿತ್ತು ಎಂದು ನಟಿಯ ವಿರುದ್ಧ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ರವೀನಾ ವಿರುದ್ಧ ಪ್ರಕರಣ ದಾಖಲಿಸಿದ್ದರು.

ರವೀನಾ ಅವರು ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಅವರ ಕಾರನ್ನು ರಿವರ್ಸ್ ತೆಗೆದುಕೊಳ್ಳಲಾಗಿತ್ತು. ಆದರೆ ಕಾರು ಯಾರಿಗೂ ಟಚ್ ಮಾಡಿಲ್ಲ. ಆದರೂ ಅಲ್ಲಿ ಮಾತಿನ ಚಕಮಕಿ ನಡೆದು ಈ ಘಟನೆ ವಿವಾದ ಸೃಷ್ಟಿಸಿದೆ. ಘಟನೆಯ ವೇಳೆ, ನಟಿ ಕಾರಿನಿಂದ ಹೊರಬಂದಿದ್ದು, ಜಗಳವಾಡಲು ಅಲ್ಲ. ಬದಲಾಗಿ ತನ್ನ ಚಾಲಕನನ್ನು ರಕ್ಷಿಸಲು ಎಂದು ಹೇಳಿದ್ದಾರೆ.

ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಲಿಲ್ಲ ಎಂದು ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಸಾಬೀತಾಗಿದೆ. ಇದೆಲ್ಲಾ ಸುಳ್ಳು ಆರೋಪ ಎಂದು ಸ್ಪಷ್ಟನೆ ನೀಡಿದ್ದಾರೆ.