ಕೋಲ್ಕಾತ್ತಾ : ಕೋಲ್ಕತ್ತಾ ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಇದೀಗ ಇಡ ದೇಶವೆ ವಿರೋಧಿಸಿದೆ. ಅದೇ ರೀತಿ ನಟಿ ಮತ್ತು  ತೃಣಮೂಲ ಕಾಂಗ್ರೆಸ್‌ನ ಮಾಜಿ ಸದಸ್ಯೆ ಮಿಮಿ ಚಕ್ರವರ್ತಿ ಕೂಡ ವಿರೋಧಿಸಿದಕ್ಕೆ ಅವರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಾ ಪೋಸ್ಟ್‌ಗಳನ್ನು ಮಾಡಿದ್ದ ನಟಿಗೆ ಈ ಬೆದರಿಕೆಗಳು ಬರಲು ಶುರುವಾಗಿವೆ.

ಪೋಸ್ಟ್ ಪ್ರಕಟಿಸಿದ ನಂತರ ತಮಗೆ ಅತ್ಯಾಚಾರ ಬೆದರಿಕೆಗಳು ಮತ್ತು ಅಶ್ಲೀಲ ಸ್ವರೂಪದ ಸಂದೇಶಗಳು ಬರುತ್ತಿವೆ ಎಂದು ನಟಿ ಮಿಮಿ ಚಕ್ರವರ್ತಿ ಮಂಗಳವಾರ ಮಾಹಿತಿ ಹಂಚಿಕೊಂಡಿದ್ದಾರೆ. ಮಿಮಿ ಈ ಬಗ್ಗೆ ಕೋಲ್ಕತಾ ಪೊಲೀಸರ ಸೈಬರ್ ಸೆಲ್ ವಿಭಾಗಕ್ಕೆ ಆ ಮಾಹಿತಿಯನ್ನು ಕೊಟ್ಟಿದ್ದಾರೆ.

ಕೋಲ್ಕತ್ತಾದಲ್ಲಿ ಈ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಟಿ ವೈಯಕ್ತಿಕವಾಗಿ ಭಾಗವಹಿಸಿದ್ದರು. ಮಿಮಿ ಅವರಲ್ಲದೆ, ನಟರಾದ ರಿದ್ಧಿ ಸೇನ್, ಅರಿಂದಮ್ ಸಿಲ್ ಮತ್ತು ಮಧುಮಿತಾ ಸರ್ಕಾರ್ ಕೂಡ ಆಗಸ್ಟ್ 14 ರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು