ಚೆನ್ನೈ: ರಾಷ್ಟ್ರಪ್ರಶಸ್ತಿ ಪಡೆದ ತಮಿಳಿನ ‘ಕಡೈಸಿ ವಿವಾಸಾಯಿ’ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ ನಟಿ ಕಾಸಮ್ಮಳ್ (71) ಮಗನ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ಈ ಘಟನೆ ಮದುರೈ ಜಿಲ್ಲೆಯ ಅನೈಯುರ್ನಲ್ಲಿರುವ ಕಾಸಮ್ಮಳ್ ಮನೆಯಲ್ಲಿ ನಡೆದಿದೆ. ಕಾಸಮ್ಮಳ್ ಪುತ್ರ ನಾಮಕೋಡಿ (52)ಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಮದ್ಯ ಖರೀದಿ ಮಾಡಲು ಹಣ ಕೊಡದಿದ್ದಕ್ಕೆ ತಾಯಿ ಕಾಸಮ್ಮಳ್ ಜತೆ ಜಗಳಕ್ಕಿಳಿದ ನಾಮಕ್ಕೋಡಿ, ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾನೆ. ಇದರ ಪರಿಣಾಮ ಕಾಸಮ್ಮಳ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಸಮ್ಮಳ್ ಅವರು ವಿಜಯ್ ಸೇತುಪತಿ ಮತ್ತು ನಲ್ಲಂದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ‘ಕಡೈಸಿ ವಿವಸಾಯಿ’ ಚಿತ್ರದಲ್ಲಿ ತಮ್ಮ ಪಾತ್ರದಿಂದಲೇ ಹೆಸರುವಾಸಿಯಾಗಿದ್ದರು. ‘ಕಡೈಸಿ ವಿವಸಾಯಿ’ ಅತ್ಯುತ್ತಮ ತಮಿಳು ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದೆ.