ಬೆಂಗಳೂರು : ಹೊರವಲಯದಲ್ಲಿ ನಡೆದ ರೇವ್‌ ಪಾರ್ಟಿ ಕೇಸ್‌ನಲ್ಲಿ ತೆಲುಗು ಚಿತ್ರರಂಗದ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಗೆ ಬರಲು 2 ನೋಟಿಸ್ ನೀಡಿದ್ದರು ಹೇಮಾ ಅವರು ಹಾಜರಾಗಿರಲಿಲ್ಲ. ಇದೀಗ 3ನೇ ನೋಟಿಸ್ ನೀಡಿದ್ದು ಇಂದು ಹೇಮಾ ಅವರು ವಿಚಾರಣೆಗೆ ಆಗಮಿಸಿದ್ದರು.

ಜನರಿಗೆ ಮುಖ ಕಾಣಬಾರದು ಎಂಬ ಉದ್ದೇಶದಿಂದ ಅವರು ಬುರ್ಕಾ ಧರಿಸಿದ್ದಾರೆ. ಪಾರ್ಟಿಯಲ್ಲಿ ಹೇಮಾ ಡ್ರಗ್ಸ್​ ಸೇವಿಸಿದ್ದರು ಎಂಬುದು ವೈದ್ಯಕೀಯ ವರದಿಯಲ್ಲಿ ಖಚಿತವಾಗಿದೆ. ಅಲ್ಲದೇ ಡ್ರಗ್ಸ್​ ಪಾರ್ಟಿಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು ಎಂಬ ಮಾಹಿತಿ ಇದೆ.

ವಶಕ್ಕೆ ಪಡೆದಿರುವ ನಟಿ ಹೇಮಾಗೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ವಿಚಾರಣೆ ಬಳಿಕ ಸಿಸಿಬಿ ಪೊಲೀಸರು ನಟಿ ಹೇಮಾ ಅವರನ್ನು ಬಂಧಿಸಿದ್ದಾರೆ.