ಉಡುಪಿ: ನಟ ರಕ್ಷಿತ್ ಶೆಟ್ಟಿ ತಂದೆ ತಾಯಿ ಮದುವೆಯ ಸುವರ್ಣ ಮಹೋತ್ಸವ ನಡೆಯಿತು. ಉಡುಪಿಯ ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಕುಟುಂಬಸ್ಥರ ಜೊತೆಗೆ ನಟ ರಕ್ಷಿತ್ ಶೆಟ್ಟಿ ಭಾಗಿಯಾದರು.

ಉಡುಪಿಯ ಕುಕ್ಕಿಕಟ್ಟೆಯಲ್ಲಿರುವ ರಕ್ಷಿತ್ ಶೆಟ್ಟಿಯ ಮನೆಯ ಸಮೀಪ ಇರುವ ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು. ಖ್ಯಾತ ಗುತ್ತಿಗೆದಾರ ಶ್ರೀಧರ ಶೆಟ್ಟಿ ರಕ್ಷಿತ್ ತಂದೆ,
ಸಾಮಾಜಿಕ ಕಾರ್ಯಕರ್ತೆ ರಂಜನಾಶೆಟ್ಟಿ ರಕ್ಷಿತ್ ತಾಯಿ. ಮಹಿಷಮರ್ದಿನಿಯ ಸಮ್ಮುಖದಲ್ಲಿ ದಂಪತಿಗಳು ಹಾರ ಬದಲಾಯಿಸಿಕೊಂಡರು. ರಕ್ಷಿತ್ ಮತ್ತು ಸಹೋದರ ಮತ್ತು ಇತರ ಕುಟುಂಬಸ್ಥರಿಂದ ಶುಭ ಹಾರೈಸಿದರು. ಕುಟುಂಬ ಸದಸ್ಯರೊಂದಿಗೆ ಬೆರೆತು ರಕ್ಷಿತ್ ಸಂಭ್ರಮಿಸಿದರು.