ಇತ್ತೀಚೆಗಷ್ಟೇ ನಟ ಧನಂಜಯ್ ಪತ್ನಿ ಡಾ. ಧನ್ಯತಾ ಕಳೆದ ಎರಡು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ್ದ ವೇಳೆ ಮಗುವಿನ ಆಗಮನದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಡಾಲಿ ಧನಂಜಯ್ ಇದೀಗ ಮೊದಲ ಬಾರಿಗೆ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್‌ಅವರ ಮದರ್ ಪ್ರಾಮಿಸ್ ಚಿತ್ರದ ಓ ಬೆಳಕೇ ಹಾಡು ವೈರಲ್ ಆಗಿದೆ. ಇದೇ ಹಾಡನ್ನು ಬ್ಯಾಗ್ರೌಂಡ್‌ನಲ್ಲಿ ಹಾಕಿ ಡಾಲಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.
ಡಾಲಿ ಪುತ್ರನಿಗೀಗ ಕೇವಲ ಎರಡು ತಿಂಗಳು. ಹೀಗಾಗಿ ಹಸುಗೂಸಿನ ಮುಖ ನೇರವಾಗಿ ತೋರಿಸದ ಡಾಲಿ, ಮುದ್ದು ಮಗನ ಪುಟಾಣಿ ಪಾದಗಳು ಎದೆಗೊತ್ತಿದ ಭಂಗಿಯಲ್ಲಿ ಪುಟ್ಟ ಕಂದನ ಕೈಯಲ್ಲಿ ಎತ್ತಿಕೊಂಡಿರುವ ಫೋಟೋ ಹಾಕಿದ್ದಾರೆ.

