ಬೆಂಗಳೂರು: ಶಾರ್ಟ್ ಮೂವಿಯಲ್ಲಿ ಆ್ಯಕ್ಟಿಂಗ್ ಮಾಡುತ್ತೇನೆ ಅಂತ ಬಂದವನು, ಸಿನಿಮಾ ನಟನ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಶೂಟಿಂಗ್ ವೇಳೆ ಸಿನಿಮಾ ನಟನ ಮನೆಯಲ್ಲಿ ಕಳ್ಳತನವಾಗಿದೆ. ‘ಫ್ಲಾಟ್ F01’ ಹೆಸರಿನ ಶಾರ್ಟ್ ಮೂವಿಯನ್ನು ನಟ ಲಿಖಿತ್ ರಾಜ್ ನಿರ್ದೇಶನ ಮಾಡುತ್ತಿದ್ದರು. ಗರುಡಪುರಾಣ, ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಸೇರಿ ಹಲವು ಶಾರ್ಟ್ ಮೂವಿಗಳಲ್ಲಿ ನಟ ಲಿಖಿತ್ ರಾಜ್ ಅಭಿನಯಿಸಿದ್ದಾರೆ. ಲಿಖಿತ್ ರಾಜ್ ಬಳಿ ಅವಕಾಶ ಕೇಳಿಕೊಂಡು ಅಭಿಷೇಕ್ ಎಂಬಾತ ಬಂದಿದ್ದನು.
ಫ್ಲಾಟ್ F01 ಶಾರ್ಟ್ ಮೂವಿಯಲ್ಲಿ ಅಭಿಷೇಕ್ ನಟನೆಗೆ ಅವಕಾಶ ಪಡೆದಿದ್ದ. ಕಳೆದ ಜೂನ್ 28 ರಿಂದ ಸಹಕಾರನಗರದ ನಟ ಲಿಖಿತ್ ಫ್ಲಾಟ್‌ನಲ್ಲಿ ಶೂಟಿಂಗ್ ನಡೆದಿತ್ತು. ಈ ವೇಳೆ ದೇವರ ಮನೆಯಲ್ಲಿದ್ದ ಚಿನ್ನದ ಸರ ಕಳುವಾಗಿತ್ತು. ನಂತರ ಪೊಲೀಸ್ ಠಾಣೆಗೆ ನಟನ ತಾಯಿ ದೂರು ನೀಡಿದ್ದರು.
ದೂರಿನನ್ವಯ ಶೂಟಿಂಗ್‌ಗೆಂದು ಬಂದು ಚಿನ್ನದ ಸರ ಕದ್ದಿದ್ದ ಅಭಿಷೇಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿ ಅಭಿಷೇಕ್‌ನಿಂದ ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

