ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬದ ಬಗ್ಗೆ ಇತ್ತೀಚೆಗೆ ಬಹಳಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಇದೀಗ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಗಳು ಜೋರಾಗಿಯೇ ಹರಿದಾಡುತ್ತಿದೆ ಇದರ ನಡುವೆ, ಅಭಿಷೇಕ್ ಬಚ್ಚನ್ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡಿದ್ದು, ತನ್ನ ಮದುವೆ ಉಂಗುರ ತೋರಿಸಿ ವದಂತಿ ನಿರಾಕರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಅದರ ಬಗ್ಗೆ ನಾನು ನಿಮಗೆ ಹೇಳಲು ಏನೂ ಇಲ್ಲ. ನೀವೆಲ್ಲರೂ ಸುದ್ದಿಗಳನ್ನು ಈಗಾಗಲೇ ಹೊರಹಾಕಿದ್ದೀರಿ. ನೀವು ಅದನ್ನು ಏಕೆ ಮಾಡುತ್ತಿದ್ದೀರಿ ಎಂದು ನನಗೆ ಅರ್ಥವಾಗಿದೆ. ನೀವು ಕೆಲವು ಸುದ್ದಿಗಳನ್ನು ಫೈಲ್ ಮಾಡಬೇಕಾಗುತ್ತದೆ. ಪರವಾಗಿಲ್ಲ, ನಾವು ಸೆಲೆಬ್ರಿಟಿಗಳು, ನಾವು ಅದನ್ನು ತೆಗೆದುಕೊಳ್ಳಲೇಬೇಕು” ಎಂದಿದ್ದಾರೆ.

