ಬೆಂಗಳೂರು: ಹಿರಿಯ ನಟಿ ಶಕುಂತಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಲೆಜೆಂಡರಿ ನಾಯಕಿ ಸಾವಿಗೆ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಕಂಬನಿ ಮಿಡಿದಿದೆ. ನಟಿ ಶಕುಂತಲಾ ಅವರು 1970 ರಲ್ಲಿ ಜೈಶಂಕರ್ ಅಭಿನಯದ ‘ಸಿಐಟಿ ಶಂಕರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.

ಈ ಚಿತ್ರದ ಯಶಸ್ಸಿನ ಬಳಿಕ ಅವರನ್ನು ಅಭಿಮಾನಿಗಳು ‘ಸಿಐಡಿ’ ಶಕುಂತಲಾ ಎಂದೇ ಕರೆಯುತ್ತಿದ್ರು. ಹಿರಿಯ ನಟಿಯ ನಿಧನಕ್ಕೆ ತಮಿಳುನಾಡಿನ ಅನೇಕ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ. ನಟಿ ಶಕುಂತಲಾ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ರು. ಬೆಂಗಳೂರಿನ ಮಗಳ ಮನೆಯಲ್ಲಿ ವಾಸವಾಗಿದ್ದ ಶಕುಂತಲ ಅವರಿಗೆ ನಿನ್ನೆ (ಸೆ.17) ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ನಂತರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.