ನವದೆಹಲಿ : ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಾಣಾವತ್ ಬುಧವಾರ ಗಾಂಧಿ ಜಯಂತಿ ದಿನದಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕಂಗನಾ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಹಾತ್ಮ ಗಾಂಧೀಜಿ ಕುರಿತು ನೀಡಿದ ಪರೋಕ್ಷ ಹೇಳಿಕೆಯೊಂದು ದೇಶದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಕಂಗನಾ ರಣಾವತ್, ‘ದೇಶಕ್ಕೆ ತಂದೆ ಇರಲ್ಲ, ಆದರೆ ಮಕ್ಕಳು (ಲಾಲ್) ಇರುತ್ತಾರೆ. ಭಾರತ ಮಾತೆಯ ಈ ಮಕ್ಕಳಿಗೆ ಧನ್ಯವಾದ’ ಎಂದು ಬರೆದಿದ್ದಾರೆ.
ಗಾಂಧೀಜಿಯನ್ನ ರಾಷ್ಟ್ರಪಿತ (ತಂದೆ) ಎಂದು ಕರೆಯಲಾಗುತ್ತೆ. ಲಾಲ್ (ಮಗು) ಬಹದ್ದೂರ್ ಶಾಸ್ತ್ರಿ ಜನ್ಮದಿನವೂ ಅಕ್ಟೋಬರ್ 3ರಂದೇ ಇದ್ದು, ಈ ಹಿನ್ನೆಲೆಯಲ್ಲಿ ಗಾಂಧಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಯವರ ಕುರಿತ ಕಂಗನಾ ಹಾಕಿರುವ ಪೋಸ್ಟ್ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಈ ಪೋಸ್ಟ್ ಗಾಂಧೀಜಿ ಅವರಿಗೆ ನೀಡಲಾಗಿರುವ ರಾಷ್ಟ್ರಪಿತ ಗೌರವವನ್ನು ಕಡೆಗಣಿಸುವ ರೀತಿಯದ್ದು ಎಂಬ ವಿಶ್ಲೇಷಣೆಗೆ ಕಾರಣವಾಗಿದೆ. ಬಿಜೆಪಿ ಸಂಸದೆ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

