News Karnataka Kannada
Saturday, May 04 2024
ಮನರಂಜನೆ

3 ಸಿನೆಮಾಗಳ ಪೋಸ್ಟರ್ ಹಂಚಿಕೊಂಡ ಪ್ರಶಾಂತ್ ನೀಲ್

Untitled 1
Photo Credit :

ಬೆಂಗಳೂರು: ಕೆಜಿಎಫ್ 2 ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್, ಮೊನ್ನೆಯಷ್ಟೇ ತೆಲುಗಿನ ಜೂನಿಯರ್ ಎನ್​ಟಿಆರ್ ಜೊತೆ ಹೊಸ ಚಿತ್ರದ ಅನೌನ್ಸ್ ಸಹ ಮಾಡಿದ್ದಾರೆ. ಇದರ ನಡುವೆ ಅಭಿಮಾನಿಗಳ ತಲೆಗೆ ಹುಳ ಬೀಡುವ ಒಂದು ಫೋಟೋವನ್ನು ನೀಲ್ ಹಂಚಿಕೊಂಡಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಇದರ ನಡುವೆ ಅವರು ತಮ್ಮ ಫೇಸ್​ಬುಕ್ ಮತ್ತು ಟ್ವಿಟರ್​ ನಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಹೌದು, ನೀಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2, ಸಲಾರ್ ಮತ್ತು ಎನ್​ಟಿಆರ್​31 ಚಿತ್ರಗಳ 3 ಪೋಸ್ಟರ್​ ಅನ್ನು ಜೋಡಿಸಿ ಹಂಚಿಕೊಂಡಿದ್ದಾರೆ. ಈ ಫೋಸ್ಟರ್ ಅನ್ನು ನೋಡಿದ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ.

ಪ್ರಶಾಂತ್ ನೀಲ್ ಈ ಪೋಟೋ ಅವನ್ನು ಶೇರ್ ಮಾಡಿಕೊಂಡ ನಂತರ ಇದೀಗ ಸಿನಿ ಪ್ರೇಮಿಗಳಲ್ಲಿ ಹೊಸದೊಂದು ಅನುಮಾನ ಹುಟ್ಟಿದ್ದು, ಈ ಮೂರು ಚಿತ್ರಗಳಿಗೂ ಏನಾದರೂ ಕನೆಕ್ಟ್ ಇದೆಯಾ ಎಂದು ಅನುಮಾನಿಸುತ್ತಿದ್ದಾರೆ. ಅದಲ್ಲದೇ ಕೆಜಿಎಫ್ 2 ಅಂತ್ಯದಲ್ಲಿ ಕೆಜಿಎಫ್ 3 ಚಿತ್ರ ಬರಲಿದೆ ಎಂಬ ಸುಳಿವನ್ನು ನೀಡಿದ್ದರ ಜೊತೆಗೆ ಇದೀಗ ಹೊಸ ಫೋಸ್ಟರ್ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ. ಅಲ್ಲದೇ ಕೆಲ ದಿನಗಳ ಹಿಂದೆ ಸಲಾರ್ ಕೆಜಿಎಫ್ 3 ಮುಂದಿನ ಭಾಗವಾಗಲಿದೆಯಾ ಎಂಬ ಮಾತುಗಳೂ ಕೇಳಿಬರುತ್ತಿತ್ತು.

ಪ್ರಶಾಂತ್ ನೀಲ್ ಚಿತ್ರಕಥೆ ಬರೆದಿರುವ ‘ಬಘೀರಾ’ ಪಾತ್ರವೂ ಮುಂಬರುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಲಿದೆ ಎಂದು ಸಹ ಊಹಿಸುತ್ತಿದ್ದಾರೆ. ಆದರೆ, ಈ ಸಂಬಂಧ ಯಾವುದೇ ಕಾಮೆಂಟ್‌ಗಳು ಮತ್ತು ಊಹಾಪೋಹಗಳಿಗೆ ಪ್ರಶಾಂತ್ ನೀಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು