News Karnataka Kannada
Saturday, May 11 2024
ಮನರಂಜನೆ

ಹೊಸ ನಿರ್ದೇಶಕರ ಜೊತೆ ಕಿಚ್ಚ: ರಿಮೇಕ್ ಗೆ ಬೈ ಬೈ, ಸ್ವಮೇಕ್ ಗೆ ಜೈ ಜೈ !

Photo Credit :

ಹೊಸ ನಿರ್ದೇಶಕರ ಜೊತೆ ಕಿಚ್ಚ: ರಿಮೇಕ್ ಗೆ ಬೈ ಬೈ, ಸ್ವಮೇಕ್ ಗೆ ಜೈ ಜೈ !

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಹೊಸ ಅಲೆಯನ್ನು ಸೃಷ್ಟಿಸಿದ್ದ, ಪ್ರತಿಭಾವಂತ ನಟ ಕಿಚ್ಚ ಸುದೀಪ್ ‘ರಿಮೇಕ್ ಗಳ ಹೀರೊ’ ಎಂಬ ಆಪಾದನೆ ಹೊತ್ತಿರುವುದು ಹಳೆಯ ಸಂಗತಿ. ಆದರೆ ಇದೀಗ ಅವರು ತಮ್ಮ ಅಭಿಮಾನಿಗಳಿಗೋಸ್ಕರ ತಮ್ಮ ದಾರಿಯನ್ನು ಕೊಂಚ ಬದಲಿಸಿದಂತೆ ಕಾಣುತ್ತದೆ.

ಹೌದು..ಈ ವರ್ಷ ಸುದೀಪ್ ಅಭಿನಯಿತ್ತಿರುವ ಸಾಲು ಸಾಲು ಸಿನೆಮಾಗಳನ್ನು ನೋಡಿದರೆ, ರಿಮೇಕ್ ಗೆ ಟಾಟಾ ಬೈ ಬೈ, ಸ್ವಮೇಕ್ ಗೆ ಜೈ ಜೈ ಎನ್ನುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಬಹುನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದೇ ತಿಂಗಳ 21 ರಿಂದ ಪ್ರೇಮ್ ನಿರ್ದೇಶನದ ‘ದ ವಿಲನ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಈ  ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

‘ಉಳಿದವರು ಕಂಡಂತೆ’ ಖ್ಯಾತಿಯ ಸ್ಯಾಂಡಲ್ ವುಡ್ ನ ಮತ್ತೊಬ್ಬ ಪ್ರತಿಭಾವಂತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಜೊತೆಗೆ ‘ಥಗ್ಸ್ ಆಫ್ ಮಾಲ್ಗುಡಿ’ ಎಂಬ ಸಿನೆಮಾದಲ್ಲಿ ಕಿಚ್ಚ ನಟಿಸಲಿದ್ದು, ನಂತರ ಅವರು ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಅಭಿನಯಿಸಲಿದ್ದು, ರಿಮೇಕ್ ಸಿನೆಮಾಗಳನ್ನು ಬಿಟ್ಟು ಹೊಸ ಪೀಳಿಗೆಯ ನಿರ್ದೇಶಕರ ಸ್ವಮೇಕ್ ಚಿತ್ರಗಳಲ್ಲಿ ಅಭಿನಯಿಸಲು ಕಿಚ್ಚ ಆಸಕ್ತಿ ತೋರಿಸಿರುವುದು ಒಂದು ಒಳ್ಳೆಯ ಬೆಳವಣಿಗೆ ಅನ್ನಬಹುದು.  

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು