News Karnataka Kannada
Saturday, May 11 2024
ಮನರಂಜನೆ

“ಸಿನೆಮಾ ಮೈ ಡಾರ್ಲಿಂಗ್” ಸಿನೆಮಾ ಲೋಕದೊಳಗೊಂದು ಸವಾರಿ

Photo Credit :

“ಸಿನೆಮಾ ಮೈ ಡಾರ್ಲಿಂಗ್” ಸಿನೆಮಾ ಲೋಕದೊಳಗೊಂದು ಸವಾರಿ

ಕನ್ನಡದ ಪ್ರಖ್ಯಾತ ಸುದ್ದಿ ವಾಹಿನಿಗಳಲ್ಲಿ ತಮ್ಮ ಮಾತಿನ ವೈಖರಿಯಿಂದ ಕರ್ನಾಟಕದ ಮನೆ-ಮನಗಳಲ್ಲಿ ಸುದ್ದಿಮಾಡಿರುವ ಗೌರೀಶ್ ಅಕ್ಕಿಯವರು ಕೆಲವು ಸಿನೆಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲೂ ಮಿಂಚಿದ್ದರು, ಆದರೆ ಈಗ ತಾವೇ ಸ್ವತಃ ತಮ್ಮ ಸಿನಿ ಅನುಭವವನ್ನು ತೆರೆಮೇಲೆ ಬಿಚ್ಚಿಡಲು ನಿರ್ದೇಶಕನಾಗಿದ್ದಾರೆ.


ಗೌರೀಶ್ ಅಕ್ಕಿಯವರ ಚೊಚ್ಚಲ ಚಿತ್ರ “ಸಿನೆಮಾ ಮೈ ಡಾರ್ಲಿಂಗ್”ನ ಟ್ರೇಲರ್ ರಿಲೀಸ್ ಆಗಿದ್ದು,  ಭರವಸೆಯ ಚಿಗುರನ್ನು ಮೂಡಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಹಾಡುಗಳು ಕೇಳುಗನ ಮನಸಿನಲ್ಲಿ ಜಾಗ ಪಡೆದಿವೆ. ತನ್ನ ಅನುಭವದ ಜೊತೆಗೆ ಇತರ ವಿಶೇಷತೆಗಳನ್ನು ಸಂಶೋಧಿಸಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಗೌರೀಶ್ ಅಕ್ಕಿಯವರು ಒಬ್ಬ ಪಳಗಿರುವ ನಿರ್ದೇಶಕನಂತೆ ಸಿನೆಮಾ ಮಾಡಿದ್ದಾರೆ.

ಗೌರೀಶ್ ಅಕ್ಕಿ ಸಿನೆಮಾಸ್ ಬ್ಯಾನರ್ ಮೂಲಕ ನಿರ್ಮಾಣವಾಗಿರುವ “ಸಿನೆಮಾ ಮೈ ಡಾರ್ಲಿಂಗ್” ಚಿತ್ರದಲ್ಲಿ ಹೊಸ ಮುಖ ವಿಹಾನ್ ಗೌಡ, ಸಂಜನಾ, ಮನೋಜಾವ ಮತ್ತು ರಾಜು ತಾಳಿಕೋಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್.ಕೆ.ರಾವ್ ಛಾಯಾಗ್ರಹಣವಿರುವ ಸಿನೆಮಾ ಶೀಘ್ರದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು