News Karnataka Kannada
Monday, April 29 2024
ಮನರಂಜನೆ

ಮೆಗಾಸ್ಟಾರ್ ಚಿರಂಜೀವಿಗೆ ಜನ್ಮದಿನದ ಸಂಭ್ರಮ: 3 ಸಿನಿಮಾ ಘೋಷಣೆ

Chiranjivi 22082021
Photo Credit :

ತೆಲುಗಿನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇಂದು 66ನೇ ವರ್ಷದ ಜನ್ಮದಿನ ಸಂಭ್ರಮ. ತಮ್ಮ ನಿವಾಸದಲ್ಲಿ ಪುತ್ರ ರಾಮ್‌ಚರಣ್‌, ಪುತ್ರಿ ಹಾಗೂ ಪತ್ನಿಯ ಸಮ್ಮುಖದಲ್ಲಿ ಸರಳವಾಗಿ ಕೇಕ್ ಕಟ್‌ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.

ತೆಲುಗು ಚಿತ್ರರಂಗದ ಗಣ್ಯರು ಸೇರಿದಂತೆ ದಕ್ಷಿಣ ಭಾರತದ ನಟ ನಟಿಯರು ಹಾಗೂ ಬಾಲಿವುಡ್‌ ತಾರೆಯರು ಚಿರುಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಚಿರು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಚಿರು ಈ ವರ್ಷ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮೂರು ಹೊಸ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ವಾಲ್ಟರ್‌ ವೀರಯ್ಯ, ಭೋಳ ಶಂಕರ್‌ ಹಾಗೂ ಗಾಡ್‌ಫಾದರ್ ಸಿನಿಮಾಗಳಲ್ಲಿ ಚಿರು ನಟಿಸುತ್ತಿದ್ದಾರೆ.

ಗಾಡ್‌ಫಾದರ್‌ ಸಿನಿಮಾವನ್ನು ಮೋಹನ ರಾಜಾ, ವಾಲ್ಟರ್‌ ವೀರಯ್ಯ ಚಿತ್ರಕ್ಕೆ ಕೆ,ಎಸ್‌ ರವೀಂದ್ರ ಹಾಗೂ ಭೋಳ ಶಂಕರ್ ಸಿನಿಮಾಗೆ ಮೇಹರ್‌ ರಮೇಶ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು