ಬೆಂಗಳೂರು: ಮಾರ್ಚ್ 9ರಿಂದ ಯಾವುದೇ ಚಿತ್ರಮಂದಿರಗಳಲ್ಲಿ ಹೊಸ ಕನ್ನಡ ಸಿನಿಮಾಗಳು ಪ್ರದರ್ಶನಗಳು ಕಾಣುವುದಿಲ್ಲ, ಸಿನಿಮಾ ಪ್ರದರ್ಶನಕ್ಕೆ ಸಂಬಂಧಪಟ್ಟಂತ್ತೆ ಯುಎಫ್ಒ ಹಾಗೂ ಕ್ಯೂಬ್ (ಡಿಜಿಟಲ್ ಸಿನಿಮಾ ಪ್ರದರ್ಶಕ ಸಂಸ್ಥೆಗಳು) ವಿಧಿಸಿರುವ ದುಬಾರಿ ವೆಚ್ಚವನ್ನು ವಿರೋಧಿಸಿ ಮಾರ್ಚ್ 9ರಿಂದ ಚಿತ್ರ ಪ್ರದರ್ಶಿಸದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.
ಮಾ.9ರಿಂದ ಬಿಕ್ಕಟ್ಟು ಬಗೆಹರಿಯುವವರೆಗೆ ಯುಎಫ್ಒ-ಕ್ಯೂಬ್ ಮೂಲಕ ಯಾವುದೇ ಸಿನಿಮಾ ಪ್ರದರ್ಶನ ಮಾಡದಿರಲು ನಿರ್ಧಾರವನ್ನು ಕೈಗೊಂಡಿದೆ.
ಯುಎಫ್ಓ ಮತ್ತು ಕ್ಯೂಬ್ ದುಬಾರಿ ವೆಚ್ಚದ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಪಾಂಡಿಚೇರಿಯ ವಾಣಿಜ್ಯ ಮಂಡಳಿಗಳು ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ಸಭೆ ನಡೆಸಿ, ಈ ವೇಳೆ ಯುಎಫ್ಓ ಕ್ಯೂಬ್ಗೆ ಸಿನಿಮಾ ಕೊಡದಿರಲು ತೀರ್ಮಾನ ತೆಗೆದುಕೊಂಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಯುಎಫ್ಒ -ಕ್ಯೂಬ್ನ ಜತೆಗಿನ ಸಭೆ ವಿಫಲವಾದ ಹಿನ್ನೆಲೆ ಸಿನಿಮಾಗಳನ್ನು ಯುಎಫ್ಒ-ಕ್ಯೂಬ್ ಮೂಲಕ ಪ್ರದರ್ಶಿಸದಿರಲು ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಹಾಗೂ ಪುದುಚೇರಿ ರಾಜ್ಯಗಳ ವಾಣಿಜ್ಯ ಮಂಡಳಿ ನಿರ್ಧರಿಸಿವೆ. ಇದೀಗ ಸಿನಿಮಾ ಬಿಡುಗಡೆಯನ್ನು ಘೋಷಿಸಿಕೊಂಡಿರುವ ನಾಲ್ಕು ಕನ್ನಡ ಸಿನಿಮಾಗಳಿಗೆ ತೊಂದರೆಯಾಗಬಾರದು ಎಂಬುದಾಗಿದೆ,’ ಎಂದರು.