ಬೆಂಗಳೂರು: ರಕ್ಷಿತ್ ಶೆಟ್ಟಿ ತನ್ನ ಬಾಳ ಸಂಗಾತಿ ರಶ್ಮಿಕಾ ಮಂದಣ್ಣ ಅವರಿಗೆ ವಿಶೇಷವಾದ ಗಿಫ್ಟ್ ವೊಂದನ್ನು ನೀಡಿದ್ದಾರೆ. ಕಿರಿಕ್ ಬೆಡಗಿ ರಶ್ಮಿಕಾಗೆ ಪ್ರಾಣಿಗಳೆಂದರೆ ಅಚ್ಚು ಮೆಚ್ಚು. ಹಾಗಾಗಿ ರಕ್ಷಿತ್ ಶೆಟ್ಟಿ ಬೆಕ್ಕನ್ನು ಗಿಫ್ಟ್ ಆಗಿ ನೀಡಿದ್ದಾರೆ. ರಶ್ಮಿಕಾ ಈ ಬೆಕ್ಕಿಗೆ ‘ಸಿಂಭ’ ಎಂದು ಹೆಸರಿಟ್ಟಿದ್ದಾರೆ.
ಅದಲ್ಲದೆ ಅವರು ಎಲ್ಲಿ ಹೊದರು ಬೆಕ್ಕನ್ನು ಜತೆಯಾಗಿ ಕರೆದುಕೊಂಡು ಹೋಗುತ್ತಾರಂತೆ. ಕಿರಿಕ್ ಪಾರ್ಟಿಯ ಕ್ಯೂಟ್ ಜೋಡಿಗಳಾದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಜುಲೈ 4 ಕೊಡಗಿನ ವಿರಾಜಪೇಟೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇದೀಗ ರಶ್ಮಿಕಾ ಅವರು ಈಗ ತೆಲುಗು ಚಿತ್ರ `ಚಲೋ’ ಪ್ರಮೋಶನ್ ನಲ್ಲಿ ಬ್ಯುಸಿ ಇದ್ದಾರೆ.