News Karnataka Kannada
Monday, April 29 2024
ಮನರಂಜನೆ

ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿ ಹೊರಹೊಮ್ಮಿದ ಮಂಜು ಪಾವಗಡಗೆ ಸಾಲು ಸಾಲು ಸಿನಿಮಾ ಆಫರ್

Manju Pavagada 09082021
Photo Credit :

ಕನ್ನಡದ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿ ಹೊರಹೊಮ್ಮಿದ ಮಂಜು ಪಾವಗಡಗೆ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿದ್ದು, ಇದೀಗ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ರಾಜೀವ್ ನಟಿಸುತ್ತಿರುವ ಉಸಿರೇ ಉಸಿರೇ ಚಿತ್ರದಲ್ಲಿ ಮಂಜು ಪಾವಗಡ ಕೂಡ ಪ್ರಮುಖ ಪ್ರಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕೆ ಸಿ.ಎಂ. ವಿಜಯ್ ಆಕ್ಷನ್ ಕಟ್ ಹೇಳಲಿದ್ದಾರೆ.

ಈ ಸಿನಿಮಾದಲ್ಲಿ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದು,  ಕ್ಲೈ ಮ್ಯಾಕ್ಸ್ ನಲ್ಲಿ ನನ್ನ ಪಾತ್ರದ ಟ್ವಿಸ್ಟ್ ಗೊತ್ತಾಗಲಿದೆ ಎಂದಿದ್ದಾರೆ ಮಂಜು. ಸಿಕ್ಕಾಪಟ್ಟೆ ಸಿನಿಮಾ ಆಫರ್ ಗಳು ಬರುತ್ತಿದ್ದ ವೇಳೆ ಮಂಜು ಕೇವಲ ಹಾಸ್ಯ ಪಾತ್ರಗಳಿಗೆ ಸೀಮಿತವಾಗಲು ನನಗೆ ಇಷ್ಟ ಇಲ್ಲ. ಕೆಲವು ವರ್ಷಗಳಾದರು ಸಿನಿಮಾರಂಗದಲ್ಲಿ ಉಳಿಯುವಂತ ಪಾತ್ರಗಳನ್ನು ಮಾಡಬೇಕು. ಹಾಗಾಗಿ ಒಳ್ಳೆ ಕಥೆಗಾಗಿ ಕಾಯುತ್ತಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಸಿರೇ ಉಸಿರೇ ಚಿತ್ರದ ಮೋಷನ್ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದು, ಆಲ್ ದಿ ಬೆಸ್ಟ್ ಎಂದು ಹಾರೈಸಿದ್ದರು. ಈಗ ಸದ್ಯ ಮಂಜು ಉಸಿರೇ ಉಸಿರೇ, ದ್ವೇಷ, ಭಜರಂಗಿ-2 ಸೇರಿದಂತೆ ಹಲವು ಚಿತ್ರಗಳಲ್ಲಿ ಮಿಂಚಲಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು