ಯುವ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಾಕಿಂಗ್ ಕ್ವೀನ್ ರಾಧಿಕಾ ಅಭಿನಯದ ಬಹದ್ದೂರ್ ಸಿನೆಮಾ ಯುವ ಜನಾಂಗದ ಹೃದಯಗಳನ್ನು ಗೆದ್ದು ಗಲ್ಲಾಪೆಟ್ಟಿಗೆಯನ್ನು ದೋಚಿತು. ಬಹದ್ದೂರ್ ಗೆದ್ದ ಖುಶಿಯಲ್ಲಿ ಮತ್ತೆ ಇದೇ ಯುವ ತಂಡ ತಮ್ಮ ಹೊಸ ಸಿನೆಮಾ ಭರ್ಜರಿಯನ್ನು ಸಂಪೂರ್ಣವಾಗಿ ಮುಗಿಸಿ ಬಿಡುಗಡೆಯ ತರಾತುರಿಯಲ್ಲಿದೆ. ಈ ಬಾರಿ ತಂಡದಲ್ಲಿ ನಾಯಕಿಯಾಗಿ ರಾಧಿಕಾ ಬದಲು ಡಿಂಪಲ್ ಕ್ವೀನ್ ರಚಿತಾ ರಾಮ್ ಭರ್ತಿಯಾಗಿದ್ದಾರೆ. ಈಗಾಗಲೇ ಭರ್ಜರಿ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ತಮ್ಮ ಭರ್ಜರಿ ಮೇಕಿಂಗ್ ಗೆ ನೋಡುಗನಿಂದ ಭರ್ಜರಿ ಲೈಕುಗಳನ್ನು ಪಡೆದಾಗಿದೆ.
ಆರ್.ಎಸ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಸ್ ಶ್ರೀನಿವಾಸ್ ನಿರ್ಮಿಸುತ್ತಿರುವ ಭರ್ಜರಿ ಸಿನೆಮಾವನ್ನು ಚೇತನ್ ಕುಮಾರ್ ಬರೆದು ನಿರ್ದೇಶಿಸಿದರೆ, ಶ್ರೀಶ ಕುಡುವಳ್ಳಿ ದೃಶ್ಯಗಳಿಗೆ ಭರ್ಜರಿಯಾಗಿ ಬಣ್ಣ ತುಂಬುತ್ತಿದ್ದಾರೆ. ಉಳಿದಂತೆ ವಿ.ಹರಿಕೃಷ್ಣ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ ಮತ್ತು ರವಿವರ್ಮ ಅವರ ಭರ್ಜರಿ ಸಾಹಸವಿದೆ. ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಧ್ರುವ ಸರ್ಜಾ ಮತ್ತು ಡಿಂಪಲ್ ಕ್ವೀನ್ ಮುದ್ದು ಜೋಡಿಯನ್ನು ತೆರೆ ಮೇಲೆ ನೋಡಲು ಪ್ರೇಕ್ಷಕ ಕಾತುರದಿಂದ ಕಾಯುತ್ತಿದ್ದಾನೆ.