ಬಿಡುಗಡೆಗೂ ಮುನ್ನವೇ ರಾಧೆಶ್ಯಾಮ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ರಾಧೆಶ್ಯಾಮ್ ನಾಯಕಿ ಪೂಜಾ ಹೆಗ್ಡೆಗೆ ಇಂದು ಜನ್ಮದಿನದ ಸಂಭ್ರಮ. ಈ ದಿನದಂದು ನಟ ಪ್ರಭಾಸ್ ಉಡುಗೊರೆಯೊಂದನ್ನು ಪೂಜಾಗೆ ನೀಡಿದ್ದಾರೆ.
ರಾಧೆಶ್ಯಾಮ್ ಚಿತ್ರದ ಪ್ರೇರಣಾ ಪಾತ್ರದ ಫಸ್ಟ್ಲುಕ್ನ್ನು ಪ್ರಭಾಸ್ ಬಿಡುಗಡೆ ಮಾಡಿದ್ದಾರೆ. ಶ್ವೇತವರ್ಣದ ಗೌನ್ನಲ್ಲಿ ಪೂಜಾ ಸುಂದರವಾಗಿ ಕಾಣುತ್ತಿದ್ದು, ಫಸ್ಟ್ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.