ಮುಂಬೈ : ಬಾಲಿವುಡ್ ನಲ್ಲಿ ಒಂದು ಸಂಚಲನವನ್ನೇ ಮೂಡಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವಿನ ಕುರಿತಂತೆ ಅನೇಕ ಊಹಾಪೋಹಗಳ ಹುಟ್ಟಿಕೊಂಡು ಹಲವಾರು ತನಿಖೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಅದರಲ್ಲಿ ಒಂದಾದ ಮಾದಕ ದ್ರವ್ಯ ಆಯಾಮದಲ್ಲಿ ತನಿಖೆ ನಡೆಸುತ್ತಿರುವ ಎನ್ ಸಿ ಬಿ , ಕುಖ್ಯಾತ ಡ್ರಗ್ಸ್ ಪೆಡ್ಲರ್ ಹೆಮಾಲ್ ಶಾ ನನ್ನು ಬಂಧಿಸಿದೆ .
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಮಾದಕ ದ್ರವ್ಯ ನಿಯಂತ್ರಣ ದಳ, ಗೋವಾದಲ್ಲಿ ಆರೋಪಿ ಹೆಮಾಲ್ ಶಾ ನನ್ನು ಬಂಧಿಸಲಾಗಿದೆ ಎಂದು ಹೇಳಿದೆ . ಆರೋಪಿಯನ್ನು ಇಂದು ಮುಂಬೈ ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಎನ್ ಸಿ ಬಿ ತಿಳಿಸಿದೆ .