News Karnataka Kannada
Thursday, May 09 2024
ಮನರಂಜನೆ

ನಟಿ ಕೀರ್ತಿ ಸುರೇಶ್​ಗೆ ಕೊರೋನಾ ಪಾಸಿಟಿವ್

Keerthi Suresh
Photo Credit :

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್​ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವಿಟರ್​ನಲ್ಲಿ ಅವರು ಮಾಹಿತಿ ಹಂಚಿಕೊಂಡ ಅವರು, ‘ನನಗೆ ಕೊವಿಡ್ ಕಾಣಿಸಿಕೊಂಡಿದ್ದು, ಸೌಮ್ಯ ಲಕ್ಷಣಗಳಿವೆ’ ಎಂದಿದ್ದಾರೆ.

ತಾನು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ ಕೂಡ ಸೋಂಕು ತಗುಲಿದೆ. ಎಲ್ಲಾ ಅಭಿಮಾನಿಗಳಿಗೆ ಸೋಂಕನ್ನು ನಿರ್ಲಕ್ಷಿಸದಂತೆ ಕೀರ್ತಿ ಕರೆ ನೀಡಿದ್ದಾರೆ.

ಎಲ್ಲರೂ ಮುನ್ನೆಚ್ಚರಿಕೆಗಳನ್ನು ಪಾಲಿಸಿ. ಒಂದು ವೇಳೆ ಇನ್ನೂ ಲಸಿಕೆ ಪಡೆದಿಲ್ಲ ಎಂದರೆ, ಆದಷ್ಟು ಶೀಘ್ರವಾಗಿ ಪಡೆದುಕೊಳ್ಳಿ. ಇದರಿಂದ ಸೋಂಕಿನ ಪರಿಣಾಮ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇದರಿಂದ ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ತೀವ್ರತರ ಸೋಂಕಿನಿಂದ ಪಾರಾಗಬಹುದು ಎಂದು ನಟಿ ತಿಳಿಸಿದ್ದಾರೆ.

ಇದೇ ವೇಳೆ ತಾನು ಶೀಘ್ರವಾಗಿ ಗುಣಮುಖರಾಗಿ ಮತ್ತೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಕೀರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು