ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರ ಮಿನಿ ಟ್ರೇಲರ್ ಗಳ ಮೂಲಕ ಈಗಾಗ್ಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ. ಚಿತ್ರದ ‘ರಾಧಾ’ ಎಂಬ ಹಾಡು ಕೂಡ ಇಂಟರ್ನೆಟ್ ನಲ್ಲಿ ಸೂಪರ್ ಹಿಟ್ ಆಗಿತ್ತು.
ಈಗ ‘ಬೀಚ್ ಬೀಚ್ ಮೆ’ ಅನ್ನೋ ಹಾಡೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಕ್ಲಬ್ ಸಾಂಗ್ ಡಾನ್ಸ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಪ್ರೀತಂ ಕಂಪೋಸ್ ಮಾಡಿರೋ ಈ ಹಾಡನ್ನು ಅರಿಜಿತ್ ಸಿಂಗ್, ಶಾಲ್ಮಲಿ ಖೋಲ್ಗಡೆ ಹಾಗೂ ಶೆಫಾಲಿ ಅಲ್ವಾರ್ಸ್ ಹಾಡಿದ್ದಾರೆ.
‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರವನ್ನು ಇಮ್ತಿಯಾಜ್ ಅಲಿ ನಿರ್ದೇಶನ ಮಾಡ್ತಿದ್ದಾರೆ. ಕಳೆದು ಹೋದ ನಿಶ್ಚಿತಾರ್ಥದ ಉಂಗುರ ಹುಡುಕಿಕೊಂಡು ಹೊರಟವರ ಕಥೆ ಇದು. ಆಗಸ್ಟ್ 4ರಂದು ಚಿತ್ರ ತೆರೆಗೆ ಬರಲಿದೆ.