ಡಿಸೆಂಬರ್ ತಿಂಗಳಿನಲ್ಲಿ ಸಿನಿಮಾ ಮತ್ತು ಸಿರೀಸ್ ಅಭಿಮಾನಿಗಳಿಗೆ ಓಟಿಟಿಯಲ್ಲಿ ಹಬ್ಬದೂಟ. ಏಕೆಂದ್ರೆ ವರ್ಷಾಂತ್ಯಕ್ಕೆ ಅನೇಕ ಸಿನಿಮಾ ಮತ್ತು ವೆಬ್ ಸಿರೀಸ್ಗಳು ಓಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ.
ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಆಹಾ, ಡಿಸ್ನೆ+ ಹಾಟ್ಸ್ಟಾರ್ ಮೊದಲಾದ ಒಟಿಟಿಗಳ ಮುಖಾಂತರ ಹಲವು ಚಿತ್ರಗಳು, ಸೀರೀಸ್ ತೆರೆಕಾಣುತ್ತಿವೆ.
ಅಭಿಷೇಕ್ ಬಚ್ಚನ್ ನಟನೆಯ ‘ಬಾಬ್ ಬಿಸ್ವಾಸ್’ ಸಿನಿಮಾ ಡಿ.3ರಂದು ಓಟಿಟಿ ಮೂಲಕ ಬಿಡುಗಡೆ ಆಗುತ್ತಿದೆ. ‘ಡಿಕಪಲ್ಡ್’ ವೆಬ್ ಸಿರೀಸ್ ಡಿ.17ರಂದು ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಲಿದೆ.
ಅಕ್ಷಯ್ ಕುಮಾರ್, ಧನುಷ್, ಸಾರಾ ಅಲಿ ಖಾನ್ ಅಭಿನಯದ ‘ಅತರಂಗಿ ರೇ’ ಚಿತ್ರ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ಡಿ.24ರಂದು ಬಿಡುಗಡೆ.
ಖ್ಯಾತ ನಟಿ ರವೀನಾ ಟಂಡನ್ ಅವರ ‘ಅರಣ್ಯಕ್’ ವೆಬ್ ಸಿರೀಸ್ ಡಿ.10ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ.