News Karnataka Kannada
Wednesday, May 01 2024
ಮನರಂಜನೆ

ಡಿಕೆಡಿ-ಕಾಮಿಡಿ ಕಿಲಾಡಿಗಳಿಗೆ ವೇದಿಕೆ ರೆಡಿ

Dkd
Photo Credit : News Kannada

ಮೈಸೂರು: ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 4ರ ಮಹಾ ಆಡಿಷನ್ಸ್ ರಾಜ್ಯಾದ್ಯಂತ ಆರಂಭವಾಗಿದೆ. ಮಹಾ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ತಯಾರಾಗುತ್ತಿದೆ.

ಸತತ ಮೂರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿ ಕಾರ್ಯಕ್ರಮಗಳ ಮೂಲಕ ಜೀ ಕನ್ನಡ ವಾಹಿನಿ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಕನ್ನಡಿಗರಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ 5 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿ ಇಡೀ ಕರ್ನಾಟಕವೇ ಹೆಜ್ಜೆ ಹಾಕುವಂತೆ ಮಾಡಿದ ಅತಿ ದೊಡ್ಡ ಡ್ಯಾನ್ಸ್ ವೇದಿಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇದೀಗ ಮತ್ತೊಂದು ಸೀಸನ್ ಗೆ ಸಜ್ಜಾಗಿದ್ದು ಕುಣಿಯೋ ಕಾಲುಗಳಿಗೆ ಗೆಜ್ಜೆ ಕಟ್ಟಲಿದೆ. ಅಷ್ಟೇ ಅಲ್ಲದೆ ನಕ್ಕು ನಗಿಸೋ ಕಲಾವಿದರ ನೆಚ್ಚಿನ ವೇದಿಕೆ ಕಾಮಿಡಿ ಕಿಲಾಡಿಗಳು ಸಹ ಮತ್ತೊಂದು ಸೀಸನ್ ಗೆ ಶುರು ಮಾಡುತ್ತಿದೆ.

ರಾಜ್ಯದಾದ್ಯಂತ ಹಲವು ಕಡೆಗಳಲ್ಲಿ ಆಸಕ್ತ ಡ್ಯಾನ್ಸ್ ಹಾಗೂ ಕಾಮಿಡಿ ಮಾಡುವ ಕಿಲಾಡಿಗಳ ಹುಡುಕಾಟ ನಡೆದಿದೆ.  ಪ್ರತಿ ಜಿಲ್ಲೆಯಲ್ಲಿಯೂ ನಿಗದಿ ಪಡಿಸಿದ ದಿನಾಂಕಗಳಂದು  ಆಡಿಷನ್ಸ್ ನಡೆಯಲಿದೆ. ಭಾಗವಹಿಸಲು ಬರುವವರು ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಅಡ್ರೆಸ್ ಪ್ರೂಫ್ ಜೆರಾಕ್ಸ್ ತರುವಂತೆ ಸೂಚಿಸಲಾಗಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ಆಡಿಷನ್ ನೀಡುವವರ ವಯಸ್ಸು 6 ರಿಂದ 60 ವರ್ಷದೊಳಗಿರಬೇಕು ಹಾಗು  ಕಾಮಿಡಿ ಕಿಲಾಡಿಗಳು ಆಡಿಷನ್ ನಲ್ಲಿ ಭಾಗವಹಿಸುವವರ ವಯಸ್ಸು 16 ರಿಂದ 60 ವರ್ಷದೊಳಗಿರಬೇಕು. ಆಸಕ್ತಿ, ಅರ್ಹತೆ ಇರುವವರು ಆಡಿಷನ್ಸ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು